ನನ್ನ ಪತ್ನಿ ಬಾಂಗ್ಲಾದೇಶಿ, ಬಂಧನ ಕೇಂದ್ರಕ್ಕೆ ಕಳುಹಿಸುವಂತೆ ಅಸ್ಸಾಂ ವ್ಯಕ್ತಿ ಆಗ್ರಹ

ನನ್ನ ಪತ್ನಿ ಬಾಂಗ್ಲಾದೇಶಿ ಪ್ರಜೆಯಾಗಿದ್ದು, ಆಕೆಯನ್ನು ಬಂಧನ ಕೇಂದ್ರಕ್ಕೆ ಕಳುಹಿಸುವಂತೆ ಅಸ್ಸಾಂ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗುವಾಹತಿ: ನನ್ನ ಪತ್ನಿ ಬಾಂಗ್ಲಾದೇಶಿ ಪ್ರಜೆಯಾಗಿದ್ದು, ಆಕೆಯನ್ನು ಬಂಧನ ಕೇಂದ್ರಕ್ಕೆ ಕಳುಹಿಸುವಂತೆ ಅಸ್ಸಾಂ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮದುವೆ ವಿಚಾರದಲ್ಲಿ ನನಗೆ ಮೋಸವಾಗಿದ್ದು, ನನ್ನ ಪತ್ನಿ ಮೊರ್ಜಿನಾ ಬಿಬಿ ತಾನು ಬಾಂಗ್ಲಾದೇಶಿ ಎಂಬುದನ್ನು ಮರೆಮಾಚಿ ನನ್ನನ್ನು ಮದುವೆಯಾಗಿದ್ದಾಳೆ. ಈ ಸಂಬಂಧ ನಾನು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ಅಕ್ಬರ್ ಅಲಿ ಅವರು ಹೇಳಿದ್ದಾರೆ.
13 ವರ್ಷಗಳ ಹಿಂದೆ ನನಗೆ ಮದುವೆಯಾಗಿದ್ದು, ನಮಗೆ ಒಂಬತ್ತು ಹಾಗೂ ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ಪತ್ನಿ ತಾನು ಭಾರತೀಯಳಲ್ಲ ಎಂಬ ವಿಚಾರವನ್ನು ನನಗೆ ಯಾವತ್ತೂ ಹೇಳಿಲ್ಲ ಎಂದು ಅಸ್ಸಾಂ ಗೊಸ್ಸೈಗಾಂವ್ ನಿವಾಸಿ ಅಕ್ಬರ್ ಅಲಿ ಅವರು ದೂರಿದ್ದಾರೆ.
ಎನ್ಆರ್ ಸಿ ಪಟ್ಟಿಯಲ್ಲಿ ಅವರ ಹೆಸರಿಲ್ಲಿದಿರುವುದರಿಂದ ಅವರ ಪೌರತ್ವದ ಬಗ್ಗೆ ನನಗೆ ಅನುಮಾನ ಬಂತು. ನನ್ನ ಮಾವ ಮತ್ತೊಬ್ಬ ವ್ಯಕ್ತಿಯ ಮೂಲಕ ಎನ್ ಆರ್ ಸಿ ಪಟ್ಟಿಯಲ್ಲಿ ತಮ್ಮ ಕುಟುಂಬ ಹೆಸರು ಸೇರಿಸಲು ಯತ್ನಿಸುತ್ತಿದ್ದರು ಎಂದು ಅಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com