ಗುಂಪು ಹಲ್ಲೆ ವಿರುದ್ಧ ಸೂಕ್ತ ಕಾನೂನು ರೂಪಿಸುವಂತೆ ಓವೈಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯ

ಗುಂಪು ಹಲ್ಲೆ ವಿರುದ್ಧ ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿದ್ದರೂ ಶಾಸನ ರಚನೆಯಾಗದಿರುವುದು ಅಚ್ಚರಿ ತಂದಿದೆ. ಇಂತಹ ಹೀನ ಕೃತ್ಯಗಳ ವಿರುದ್ಧ ಸೂಕ್ತ ಕಾನೂನು ರೂಪಿಸಬೇಕೆಂದು ಎಐಎಂಐಎ ಅಧ್ಯಕ್ಷ ಅಸುದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಓವೈಸಿ
ಓವೈಸಿ
ನವದೆಹಲಿ:  ಗುಂಪು ಹಲ್ಲೆ ವಿರುದ್ಧ ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿದ್ದರೂ ಶಾಸನ ರಚನೆಯಾಗದಿರುವುದು ಅಚ್ಚರಿ ತಂದಿದೆ. ಇಂತಹ ಹೀನ ಕೃತ್ಯಗಳ ವಿರುದ್ಧ ಸೂಕ್ತ ಕಾನೂನು ರೂಪಿಸಬೇಕೆಂದು  ಎಐಎಂಐಎ ಅಧ್ಯಕ್ಷ ಅಸುದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆರ್ ಎಸ್ ಎಸ್ ದ್ವೇಷವನ್ನು ಹರಡುತ್ತಿದ್ದು, ಮುಸ್ಲಿಂರ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ.ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಸಾಹಿತ್ಯವನ್ನು ಓದಿದ್ದೀರಾ,  ಮಾನವತವಾದ ಬಗ್ಗೆ ದೀನ್ ದಯಾಳ್ ಉಪಾಧ್ಯಾಯ ಏನು ಬರೆದಿದ್ದಾರೆ, ಮುಸ್ಲಿಂರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಓದಿ ಎಂದು ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಇತ್ತೀಚಿಗೆ ನಡೆದ ತಬ್ರೇಜ್ ಅನ್ಸಾರಿ ಹತ್ಯೆ ಕುರಿತಂತೆ ಮಾತನಾಡಿದ ಓವೈಸಿ, ಶ್ರೀರಾಮ, ಜೈ ಹನುಮನ್ ಎಂದು ಕೂಗುವಂತೆ ಗುಂಪೊಂದು ಒತ್ತಾಯಿಸಿರುವ ವಿಡಿಯೋ ಇದೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಆ ಯುವಕನನ್ನು ಹತ್ಯೆ ಮಾಡಿದವರನ್ನು ಉಗ್ರರು ಎಂದು ಕರೆಯುತ್ತಾರೆಯೇ, ಏಕೆ ಕಾನೂನು ರೂಪಿಸುತ್ತಿಲ್ಲ, ಸುಪ್ರೀಂಕೋರ್ಟ್ ಕಾನೂನು ಜಾರಿಗೆ ತನ್ನಿ ಎಂದು ಹೇಳಿದ್ದರೂ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮ, ಜೈ ಹನುಮಾನ್ ಎಂದು ಘೋಷಣೆ ಕೂಗುವಂತೆ  ಹಲ್ಲೆಕೋರರು  ಒತ್ತಾಯಿಸಿದ್ದರೂ ಮುಸ್ಲಿಂರು ಹಾಗೆ ಮಾಡಬೇಡಿ ಎಂದು ಸಲಹೆ ನೀಡಿದರು. ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧವಾಗಿದ್ದು, ಕಾನೂನು ರಚನೆಗಾಗಿ ಹೋರಾಡಬೇಕಾಗದ ಅಗತ್ಯವಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com