ಪಿಂಕ್ ಸಿಟಿ ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ

ಸಾಂಪ್ರದಾಯಿಕ ವಾಸ್ತುಶಿಲ್ಪ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ತಾನದ ರಾಜಧಾನಿ ಜೈಪುರಕ್ಕೆ ಯುನಿಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಜಸ್ತಾನ: ಸಾಂಪ್ರದಾಯಿಕ ವಾಸ್ತುಶಿಲ್ಪ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ತಾನದ ರಾಜಧಾನಿ ಜೈಪುರಕ್ಕೆ ಯುನಿಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರಕಿದೆ. ಯುನೆಸ್ಕೋ ವಿಶ್ವ ಪಾರಂಪರಿಕಾ ಪಟ್ಟಿಯಲ್ಲಿ ಜೈಪುರ ಸೇರ್ಪಡೆಯಾಗಿರುವ ವಿಷಯವನ್ನು  ಯುನೆಸ್ಕೋ ಇಂದು ಮಧ್ಯಾಹ್ನ ಟ್ವೀಟ್ ಮೂಲಕ ತಿಳಿಸಿದೆ. 
ಬಾಕುವಿನಲ್ಲಿ  ಜೂನ್ 30 ರಿಂದ ಆರಂಭವಾಗಿರುವ ಯುನೆಸ್ಕೋ ವಿಶ್ವ ಪಾರಂಪರಿಕಾ ಸಮಿತಿಯ 43ನೇ ಅಧಿವೇಶನದಲ್ಲಿ ನಂತರ ಈ ವಿಷಯವನ್ನು ಪ್ರಕಟಿಸಲಾಗಿದೆ. ಯುನೆಸ್ಕೂ ವಿಶ್ವಪಾರಂಪರಿಕ ಪಟ್ಟಿ  ಸೇರ್ಪಡೆಗೆ  ಜೈಪುರ ನಾಮನಿರ್ದೇಶನವನ್ನು ಸಮಿತಿಯಲ್ಲಿ ಪರಿಶೀಲಿಸಿದ ಬಳಿಕ ಅಂತಿಮವಾಗಿ ಈ ಘೋಷಣೆಯನ್ನು ಹೊರಡಿಸಲಾಗಿದೆ.
ಜೈಪುರ ನಗರ ವಿಶ್ವ ಪಾರಂಪರಿಕಾ ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. "ಜೈಪುರ ಸಂಸ್ಕೃತಿ ಮತ್ತು ಶೌರ್ಯಕ್ಕೆ ಸಂಬಂಧಿಸಿದ ನಗರವಾಗಿದೆ. ಸೊಗಸಾದ ಮತ್ತು ಶಕ್ತಿಯುತ, ಜೈಪುರದ ಆತಿಥ್ಯವು ಎಲ್ಲೆಡೆಯಿಂದ ಜನರನ್ನು ಸೆಳೆಯುತ್ತದೆ. ಈ ನಗರವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರಿಸಿರುವುದರಿಂದ   ಸಂತೋಷವಾಗಿದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಐತಿಹಾಸಿಕ ಗೋಡೆಯ ನಗರವಾದ ಜೈಪುರವನ್ನು ಕ್ರಿ.ಶ 1727 ರಲ್ಲಿ  2 ನೇ ಸವಾಯಿ ಜೈ ಸಿಂಗ್ ರ ಆಶ್ರಯದಲ್ಲಿ ಸ್ಥಾಪಿಸಲಾಯಿತು. ಇದು ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವಾಗಿದೆ  .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com