ಉತ್ತರ ಪ್ರದೇಶ: ಬಿಜೆಪಿ ಯುವ ಮುಖಂಡನ ಪತ್ನಿಗೆ ಗುಂಡಿಕ್ಕಿ ಹತ್ಯೆ

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಫೆತೆಪುರ್ ಪ್ರದೇಶಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಫೆತೆಪುರ್ ಪ್ರದೇಶಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಮುಖಂಡ ರಾಹುಲ್ ಸಿಂಗ್ ಅವರ ಪತ್ನಿ ಸ್ನೇಹಲತಾ(28) ಅವರನ್ನು ನಿನ್ನೆ ರಾತ್ರಿ ನಿಗೂಢವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ತಂದೆ ರಾಮಕುಮಾರ್ ಅವರು ಅಳಿಯ, ಬಿಜೆಪಿ ಯುವ ಮುಖಂಡನ ವಿರುದ್ಧ ಕೊಲೆ ಆರೋಪ ಮಾಡಿದ್ದು, ವರದಕ್ಷಿಣೆ ನೀಡದ ಹಿನ್ನಲೆಯಲ್ಲಿ ರಾಹುಲ್ ಸಿಂಗ್ ನನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಜನವರಿ 27ರಂದು ನನ್ನ ಮಗಳ ಮದುವೆಯಾಗಿದ್ದು, ಮದುವೆ ನಂತರ ಆಕೆಯ ಪತಿ ರಾಹುಲ್ ಸಿಂಗ್ ಕಾರು ಕೊಡಿಸುವಂತೆ ನನಗೆ ಒತ್ತಾಯಿಸುತ್ತಿದ್ದರು ರಾಮಕುಮಾರ್ ದೂರಿದ್ದಾರೆ. ಆದರೆ ಮಾವನ ಆರೋಪವನ್ನು ತಳ್ಳಿಹಾಕಿದ ಅಳಿಯ ರಾಹುಲ್ ಸಿಂಗ್ ಅವರು, ನಾನು ಮತ್ತು ನನ್ನ ಪತ್ನಿ ದೌಲತ್ ಪುರಕ್ಕೆ ಹೋಗುತ್ತಿದ್ದಾರೆ ದರೋಡೆಕೋರರು ನಮ್ಮನ್ನು ತಡೆದು ಲೂಟಿ ಮಾಡಿದರು. ಅಲ್ಲದೆ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರನ್ನು ತಡೆಯಲು ಹೋದ ಸ್ನೇಹಲತಾ ಮೇಲೆ ಗುಂಡು ಹಾರಿಸಿದರು. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಿದ್ದಾರೆ.
ಯುವತಿ ತಂದೆಯ ದೂರಿನ ಆಧಾರದ ಮೇಲೆ ರಾಹುಲ್ ಸಿಂಗ್ ಹಾಗೂ ಆತನ ಕುಟುಂಬದ ಐವರ ವಿರುದ್ಧ ವರದಕ್ಷಿಣೆ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಬಾರಾಬಂಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕಾಶ್ ತೋಮರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com