ಕರ್ನಾಟಕ ಸಮ್ಮಿಶ್ರ ಸರ್ಕಾರ ಉಳಿಯಲ್ಲ ಎಂದು 13 ತಿಂಗಳ ಹಿಂದೆಯೇ ಊಹಿಸಿದ್ದೆವು: ಶಿವಸೇನೆ

ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸಮ್ಮಿಶ್ರ ಸರ್ಕಾರಉಳಿಸಿಕೊಳ್ಲಲು ಮೈತ್ರಿಪಕ್ಷಗಳು ಸೇರಿ ತಂತ್ರ ಹೆಣೆಯುತ್ತಿದೆ. ಈ ನಡುವೆ ರಾಜ್ಯದ ಸಮ್ಮಿಶ್ರ ....

Published: 08th July 2019 12:00 PM  |   Last Updated: 08th July 2019 09:19 AM   |  A+A-


Downfall of K’taka coalition govt predicted when it was formed: Shiv Sena

ಕರ್ನಾಟಕದ ಸಮ್ಮಿಶ್ರ ಸರ್ಕಾರ ಉಳಿಯಲ್ಲ ಎಂದು 13 ತಿಂಗಳ ಹಿಂದೆಯೇ ಊಹಿಸಿದ್ದೆವು: ಶಿವಸೇನೆ

Posted By : RHN RHN
Source : ANI
ಮುಂಬೈ: ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸಮ್ಮಿಶ್ರ ಸರ್ಕಾರಉಳಿಸಿಕೊಳ್ಲಲು ಮೈತ್ರಿಪಕ್ಷಗಳು ಸೇರಿ ತಂತ್ರ ಹೆಣೆಯುತ್ತಿದೆ. ಈ ನಡುವೆ ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಶಿವಸೇನೆ ಕಳೆದ 13 ತಿಂಗಳ ಹಿಂದೆಯೇ ತೀರ್ಮಾನಿಸಿತ್ತು.

“ಕರ್ನಾಟಕ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ, ಅದು ಪತನವಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಈ ಸರ್ಕಾರದ ಪತನವನ್ನು ಊಹಿಸಲಾಗಿತ್ತು. ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ.ಕುಮಾರಸ್ವಾಮಿಯ ಬೆಂಬಲದೊಂದಿಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ.  ಆದರೆ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳ್ಖು ಹೆಚ್ಚು ದಿನ ಬಾಳುವುದಿಲ್ಲ" ಶಿವಸೇನೆ ತನ್ನಮುಖವಾಣಿ ಸಾಮ್ನಾದ ಸಂಪಾದಕೀಯ ಲೇಖನದಲ್ಲಿ ಹೇಳಿಕೊಂಡಿದೆ.

ಜುಲೈ 6 ರಂದು ರಾಜ್ಯ ವಿಧಾನಸಭೆಯ 11 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.ಕರ್ನಾಟಕದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಬಲ 105 ಕ್ಕೆ ಇಳಿದಿದೆ, ಬಹುಮತಕ್ಕೆ ಅಗತ್ಯವಾಗಿರುವ 113 ಮ್ಯಾಜಿಕ್ ಸಂಖ್ಯೆಗಿಂತ ಎಂಟು ಸ್ಥಾನ ಕಡಿಮೆಯಾಗಿದೆ.

ರಾಜ್ಯ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳಿಂದ ಅಮೆರಿಕಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಬೆಂಗಳೂರಿಗೆ ಮರಳಿದ್ದಾರೆ.ಅವರು ಜೆಡಿಎಸ್ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.

ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೋಳಿ ಕಳೆದ ವಾರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದರು.

ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರೆಂದರೆ ಬಿ.ಸಿ.ಪಾಟೀಲ್, ಎಚ್.ವಿಶ್ವನಾಥ್, ನಾರಾಯಣ್ ಗೌಡ, ಎಸ್ ಹೆಬ್ಬಾರ್, ಮಹೇಶ್ ಕುಮತಳ್ಳಿ, ಗೋಪಾಲಯ್ಯ ರಾಮಲಿಂಗ ರೆಡ್ಡಿ ಮತ್ತು ಪ್ರತಾಪ್ ಗೌಡ ಪಾಟೀಲ್ ಸೇರಿದ್ದಾರೆ. ಭಿನ್ನಮತೀಯ ಶಾಸಕರು ಮುಂಬೈನ ಹೋಟೆಲ್‌ವೊಂದರಲ್ಲಿ ತಂಗಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp