ಗುಜರಾತ್: ಗರ್ಭಿಣಿ ಪತ್ನಿ ಕರೆದುಕೊಂಡು ಬರಲು ಹೋಗಿದ್ದ ದಲಿತ ವ್ಯಕ್ತಿಯ ಹತ್ಯೆ

ತನ್ನ ಮೇಲ್ವರ್ಗದ ಗರ್ಭಿಣಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಮಾವನ ಮನೆಗೆ ಹೋಗಿದ್ದ 25 ವರ್ಷದ ದಲಿತ ವ್ಯಕ್ತಿಯನ್ನು ಪತ್ನಿ ಸಂಬಂಧಿಕರು...

Published: 09th July 2019 12:00 PM  |   Last Updated: 09th July 2019 11:44 AM   |  A+A-


Dalit man, who went to bring home pregnant wife, hacked to death by in-laws in Gujarat

ಸಾಂದರ್ಭಿಕ ಚಿತ್ರ

Posted By : LSB LSB
Source : PTI
ಅಹಮದಾಬಾದ್: ತನ್ನ ಮೇಲ್ವರ್ಗದ ಗರ್ಭಿಣಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಮಾವನ ಮನೆಗೆ ಹೋಗಿದ್ದ 25 ವರ್ಷದ ದಲಿತ ವ್ಯಕ್ತಿಯನ್ನು ಪತ್ನಿ ಸಂಬಂಧಿಕರು ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಹರೇಶ್ ಸೋಲಂಕಿ ಎಂಬುವವರು ತನ್ನ ಎರಡು ತಿಂಗಳ ಗರ್ಭಿಣಿ ಪತ್ನಿ ಉರ್ಮಿಳಾ ಅವರನ್ನು ಕರೆದುಕೊಂಡು ಬರಲು ಅಹಮದಾಬಾದ್ ಜಿಲ್ಲೆಯ ವರ್ಮೊರ್ ಗ್ರಾಮಕ್ಕೆ ತೆರಳಿದ್ದಾಗ ಅವರನ್ನು ಕೊಲೆ ಮಾಡಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಉರ್ಮಿಳಾ ಅವರು ಮೇಲ್ವರ್ಗದ ದರ್ಬಾರ್ ಸಮುದಾಯಕ್ಕೆ ಸೇರಿದ್ದು, ಕೆಲವು ತಿಂಗಳ ಹಿಂದಷ್ಟೇ ಹರೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಕಚ್ ಜಿಲ್ಲೆಯ ಗಾಂಧಿಧಾಮದಲ್ಲಿ ದಂಪತಿಗಳು ವಾಸಿಸುತ್ತಿದ್ದರು ಉಪ ಪೊಲೀಸ್ ಅಧೀಕ್ಷಕ ಪಿಡಿ ಮನ್ವಾರ್ ಅವರು ಹೇಳಿದ್ದಾರೆ.

ಕೆಲವು ವಾರಗಳಲ್ಲೇ ಪತ್ನಿಯನ್ನು ಕಳುಹಿಸುವುದಾಗಿ ಹೇಳಿದ್ದರು. ಆದರೆ ಎರಡು ತಿಂಗಳಾದರೂ ಪತ್ನಿ ಬರದ ಹಿನ್ನೆಲೆಯಲ್ಲಿ ಹರೇಶ್ ಅವರು ತಾವೇ ಪತ್ನಿ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ಪತ್ನಿ ಕಳುಹಿಸಲು ನಿರಾಕರಿಸಿದ ಉರ್ಮಿಳಾ ಸಂಬಂಧಿಕರು ಹರೇಶ್ ಮೇಲೆ ಹರಿತವಾದ ವಸ್ತುಗಳಿಂದ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹರೇಶ್ ಸೋಲಂಕಿ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಹರೇಶ್ ಮಾವ ಸೇರಿದಂತೆ ಪತ್ನಿಯ 8 ಸಂಬಂಧಿಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮನ್ವಾರ್ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp