ಕರ್ನಾಟಕ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಳ್ಳಲು ಸಿಎಂ ಕಮಲನಾಥ್!

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿರುವ ಸಂದರ್ಭದಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ...

Published: 10th July 2019 12:00 PM  |   Last Updated: 10th July 2019 01:05 AM   |  A+A-


chieF Minister  Kamal Nath

ಸಿಎಂ ಕಮಲನಾಥ್

Posted By : SD SD
Source : PTI
ಭೂಪಾಲ್: ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿರುವ ಸಂದರ್ಭದಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ 7 ತಿಂಗಳಾಗಿದೆ, ಬಿಜೆಪಿಯಿಂದ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಕಮಲನಾಥ್ ಎಲ್ಲಾ ರೀತಿಯ ಸರ್ಕಸ್ ನಡೆಸುತ್ತಿದ್ದಾರೆ,

ತಮಗೆ ಬೆಂಬಲ ನೀಡಿರುವ ಎಸ್ ಪಿ , ಬಿಎಸ್ ಪಿ ಮತ್ತು ಪಕ್ಷೇತರ ಶಾಸಕರು ಯಾವುದೇ ಕಾರಣಕ್ಕೂ ರಾಜ್ಯ ರಾಜಧಾನಿಯನ್ನು ಬಿಟ್ಟು ಹೋಗದಂತೆ ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲೇ ಮುಂಗಾರು ಅಧಿವೇಶನ ಆರಂಭವಾಗುವವರೆಗೂ ಎಲ್ಲಿಗೂ ತೆರಳದಂತೆ ಸೂಚಿಸಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಹಣಕಾಸು ಮಸೂದೆ ಮಂಡಿಸಲು ಅಗತ್ಯ ಶಾಸಕರ ಅವಶ್ಯಕತೆ ಇರುವ ಕಾರಣ ಎಲ್ಲಾ ಶಾಸಕರು ಹಾಜರಿರಬೇಕೆಂದು ತಿಳಿಸಿದ್ದಾರೆ.

ಜುಲೈ 8ರಿಂದ ಮಧ್ಯಪ್ರದೇಶ ವಿಧಾನಸಭೆ ಕಲಾಪ ಆರಂಭವಾಗಿದ್ದು, 19 ದಿನಗಳ ಕಾಲ ಸದನ ನಡೆಯಲಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp