ಸುಪ್ರೀಂ ಕೋರ್ಟ್ ವಕೀಲ ದಂಪತಿ ಇಂದಿರಾ ಜೈಸಿಂಗ್-ಆನಂದ್ ಗ್ರೋವರ್ ನಿವಾಸದ ಮೇಲೆ ಸಿಬಿಐ ದಾಳಿ

ವಿದೇಶಿ ಕೊಡುಗೆ(ನಿಯಂತ್ರಣ)ಕಾಯ್ದೆ ಉಲ್ಲಂಘನೆ ಸಂಬಂಧ ಹಿರಿಯ ವಕೀಲ ಇಂದಿರಾ ಜೈಸಿಂಗ್ ಮತ್ತು ...
ಇಂದಿರಾ ಜೈಸಿಂಗ್-ಆನಂದ್ ಗ್ರೋವರ್
ಇಂದಿರಾ ಜೈಸಿಂಗ್-ಆನಂದ್ ಗ್ರೋವರ್
ನವದೆಹಲಿ: ವಿದೇಶಿ ಕೊಡುಗೆ(ನಿಯಂತ್ರಣ)ಕಾಯ್ದೆ ಉಲ್ಲಂಘನೆ ಸಂಬಂಧ ಹಿರಿಯ ವಕೀಲ ಇಂದಿರಾ ಜೈಸಿಂಗ್ ಮತ್ತು ಆಕೆಯ ಪತಿ ಆನಂದ್ ಗ್ರೋವರ್ ಅವರ ನಿವಾಸದ ಮೇಲೆ ಕೇಂದ್ರ ತನಿಖಾ ದಳ ಗುರುವಾರ ದಾಳಿ ನಡೆಸಿದೆ.
ಮುಂಬೈ ಮತ್ತು ದೆಹಲಿಯಲ್ಲಿರುವ ಜೈಸಿಂಗ್ ಮತ್ತು ಗ್ರೋವರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಎಲ್ಲಿ ನಡೆಸುತ್ತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಮಾಹಿತಿ ಬಿಟ್ಟುಕೊಟ್ಟಿಲ್ಲ.
ತಮ್ಮ ಸರ್ಕಾರೇತರ ಸಂಘಟನೆ ಎನ್ ಜಿಒಗೆ ಬಂದ ವಿದೇಶಿ ದೇಣಿಗೆಯನ್ನು ಎಫ್ ಸಿಆರ್ ಎ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ದಂಪತಿ ವಿರುದ್ಧ ಈ ವರ್ಷದ ಆರಂಭದಲ್ಲಿ ಕೇಸು ದಾಖಲಿಸಿತ್ತು. 
ಜೈಸಿಂಗ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದಾಗ 2009ರಿಂದ 2014ರವರ ನಡುವಿನ ಅವಧಿಯಲ್ಲಿ ವಿದೇಶಿ ದೇಣಿಗೆಯ ಉಲ್ಲಂಘನೆಯಾಗಿತ್ತು ಎಂದು ಸಿಬಿಐ ಆರೋಪಿಸಿದೆ. ಈ ಅವಧಿಯಲ್ಲಿ ಜೈಸಿಂಗ್ ತಮ್ಮ ಎನ್ ಜಿಒಗೆ ಸಿಕ್ಕಿದ ದೇಣಿಗೆಯನ್ನು ವಿದೇಶಕ್ಕೆ ಪ್ರವಾಸ ಹೋಗುವುದಕ್ಕೆ ಖರ್ಚು ಮಾಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com