ಚೆನ್ನೈ: ವಿಶ್ವಬ್ಯಾಂಕ್ ನೆರವಿನಿಂದ ಕಟ್ಟಿದ ಆಸ್ಪತ್ರೆ ಮಾಯ, ಖಾಸಗಿ ರಿಯಲ್ ಎಸ್ಟೇಟ್ ಪಾಲು!

ವಿಶ್ವಬ್ಯಾಂಕಿನ ನೆರವಿನಡಿ ಚೆನ್ನೈಯ ಮಾಥುರ್ ಎಂಎಂಡಿಎ ಪ್ರದೇಶದಲ್ಲಿರುವ ಸುಮಾರು 50 ಸಾವಿರ ನಿವಾಸಿಗಳಿಗೆ ನೆರವಾಗಲೆಂದು ...
ಆಸ್ಪತ್ರೆ ಕಟ್ಟಡವಿದ್ದ ಸ್ಥಳ
ಆಸ್ಪತ್ರೆ ಕಟ್ಟಡವಿದ್ದ ಸ್ಥಳ
ಚೆನ್ನೈ: ವಿಶ್ವಬ್ಯಾಂಕಿನ ನೆರವಿನಡಿ ಚೆನ್ನೈಯ ಮಾಥುರ್ ಎಂಎಂಡಿಎ ಪ್ರದೇಶದಲ್ಲಿರುವ ಸುಮಾರು 50 ಸಾವಿರ ನಿವಾಸಿಗಳಿಗೆ ನೆರವಾಗಲೆಂದು ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಆ ಆಸ್ಪತ್ರೆಯನ್ನು ಕೆಡವಿ ಆಸ್ಪತ್ರೆ ಜಾಗ ಖಾಸಗಿ ರಿಯಲ್ ಎಸ್ಟೇಟ್ ನವರ ಪಾಲಾಗಿದೆ.ಆಸ್ಪತ್ರೆಯನ್ನು ಕೆಡವಿ ಹಾಕಲು ಕಳೆದ ವರ್ಷ ನಗರ ಪಾಲಿಕೆ ಅನುಮತಿ ನೀಡಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.
ಸಾರ್ವಜನಿಕ ಬಳಕೆಯ ಭೂಮಿಯ ಮೇಲೆ ಇದ್ದ ಸೇಲ್ ಡೀಡ್ ದಾಖಲಾತಿ ಆಧಾರದ ಮೇಲೆ ಖಾಸಗಿ ರಿಯಲ್ ಎಸ್ಟೇಟ್ ನವರಿಗೆ ಭೂಮಿಯನ್ನು ನೀಡಲಾಗಿದೆ. ಸೇಲ್ ಡೀಡ್ ನಲ್ಲಿ ಕಟ್ಟಡದ ಬಗ್ಗೆ ದಾಖಲು ಇಲ್ಲ. ನಗರಪಾಲಿಕೆಯ ದಾಖಲೆ ಪ್ರಕಾರ ಭೂಮಿಯನ್ನು ಆಸ್ಪತ್ರೆ ಬಳಕೆಗೆ ಬಳಸಲಾಗುತ್ತಿದೆ ಎಂದು ಇದ್ದರೂ ಖಾಸಗಿಯವರ ಪಾಲಾಗಿರುವುದರಿಂದ ಇನ್ನು ಅಲ್ಲಿ ಸಾರ್ವಜನಿಕ ಆಸ್ಪತ್ರೆ ತಲೆಯೆತ್ತುವುದು ದೂರದ ಮಾತಾಗಿದೆ. 
ಆಸ್ಪತ್ರೆ ಕಟ್ಟುವ ಉದ್ದೇಶವಿದ್ದರೆ ಈಗಿದ್ದ ಕಟ್ಟಡವನ್ನು ಏಕೆ ಕೆಡವಿದರು ಎಂದು ಕೇಳುತ್ತಾರೆ ಮಾಥುರ್ ಎಂಎಂಡಿಎ ಅಭಿವೃದ್ಧಿ ಸಂಸ್ಥೆಯ ಸಿಎಂ ರಮೇಶ್.
ವಿಶ್ವಬ್ಯಾಂಕಿನಿಂದ ನೆರವು ಮಾತ್ರವಲ್ಲದೆ ನಿವಾಸಿಗಳು ಕೂಡ ತಾವು ಖರೀದಿಸಿದ ನಿವೇಶನಗಳ ಮೇಲೆ ಅಭಿವೃದ್ಧಿ ಶುಲ್ಕ ಎಂದು ಪಾವತಿಸಿದ್ದರು. ಇಲ್ಲಿ 1992ರಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದರೂ ಕೂಡ ಇಲ್ಲಿಯವರೆಗೆ ಕಾರ್ಯನಿರ್ವಹಿಸಲೇ ಇಲ್ಲ. ಸೂಕ್ತ ಸೌಕರ್ಯವಿಲ್ಲವೆಂದು ರೋಟರಿ ಕ್ಲಬ್ 19 ಲಕ್ಷ ರೂಪಾಯಿ ಧನಸಹಾಯ ನೀಡಿ ಆಸ್ಪತ್ರೆಯ ಮೂಲಸೌಕರ್ಯ ಹೆಚ್ಚಿಸಲು ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಯೋಜನೆಗಳೆಲ್ಲ ಅಂತಿಮಗೊಳಿಸುವ ಮುನ್ನವೇ ಹೌಸಿಂಗ್ ಬೋರ್ಡ್ ಆಸ್ಪತ್ರೆ ಕಟ್ಟಡವನ್ನು ಮಾರಾಟ ಮಾಡಿದೆ ಎಂದು ಸಂಘದ ಮತ್ತೊಬ್ಬ ಸದಸ್ಯ ಆರ್ ಎಸ್ ಬಾಬು ಹೇಳುತ್ತಾರೆ.
ಅಧಿಕಾರಿಗಳ ಹಣದ ಆಮಿಷದಿಂದ ಇಲ್ಲಿನ ನಿವಾಸಿಗಳು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವಾಸಿಗಳಿಗೆ ಹತ್ತಿರದಲ್ಲಿ ಆರೋಗ್ಯ ಸೇವೆ ಸಿಗುತ್ತಿಲ್ಲ. ಆಸ್ಪತ್ರೆಗೆ ದೂರದ ನಗರ ಆಸ್ಪತ್ರೆ ಮಣಾಲಿಗೆ ಹೋಗಬೇಕು. ಅಲ್ಲಿ ಯಾವಾಗಲೂ ರೋಗಿಗಳ ಜನಜಂಗುಳಿಯಿರುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು ಲಲಿತಾ ರಾಘವನ್. 
ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರಕರಣ ಕುರಿತು ತನಿಖೆ ನಡೆಸುವುದಾಗಿ ಹೇಳಿದರು.
ತಮಿಳುನಾಡು ಹೌಸಿಂಗ್ ಬೋರ್ಡ್ ನ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಇಬ್ಬರು ವ್ಯಕ್ತಿಗಳು ನಿವೇಶನ ಖರೀದಿಸಿದ್ದರು. ಒಂದು ಸಾರ್ವಜನಿಕ ಬಳಕೆಯ ನಿವೇಶನವನ್ನು ಮಾರಾಟ ಮಾಡಲಾಗಿದೆ. ಆಸ್ಪತ್ರೆ ಕಟ್ಟಡ ಹೇಗೆ ಮಾರಾಟವಾಗಿ ಹೋಯಿತು ಗೊತ್ತಾಗುತ್ತಿಲ್ಲ. ಕೇಸಿನ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com