ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗಳನ್ನು ರಕ್ಷಿಸಿ ಹಿರೋ ಆದ 5ನೇ ತರಗತಿ ಬಾಲಕ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸಿದ ಅಸ್ಸಾಂನ 11 ವರ್ಷದ ಬಾಲಕನೊಬ್ಬ ರಾತ್ರೋ ರಾತ್ರಿ ಹಿರೋ ಆಗಿದ್ದಾನೆ
ಉತ್ತಮ್ ತಂತಿ
ಉತ್ತಮ್ ತಂತಿ
ಗುವಾಹಟಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸಿದ ಅಸ್ಸಾಂನ 11 ವರ್ಷದ ಬಾಲಕನೊಬ್ಬ ರಾತ್ರೋ ರಾತ್ರಿ ಹಿರೋ ಆಗಿದ್ದಾನೆ.  ಆದಿವಾಸಿ ಸಮುದಾಯಕ್ಕೆ ಸೇರಿದ ಉತ್ತಮ್ ತಂತಿ ಈ ಸಾಧನೆ ಮಾಡಿದ್ದು,  ಆತನ ಹೆಸರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ.
ಈತನ ಪರಾಕ್ರಮ ಮುಖ್ಯಮಂತ್ರಿ ಸರ್ಬಾನಂದಾ ಸೊನಾವಾಲ್ ಅವರ ಮನ ಸೆಳೆದಿದೆ. ಉತ್ತಮ್ ತಂತಿಯ ಧೈರ್ಯವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ನದಿಯಲ್ಲಿ ಮುಳುಗುತ್ತಿದ್ದ ತಾಯಿ ಮಗಳನ್ನು ರಕ್ಷಿಸಿದ ಆತನ ಧೈರ್ಯಕ್ಕೆ ಹ್ಯಾಟ್ಸ್ ಆಪ್ ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರ  ನದಿಗೆ ಬೀಳುತ್ತಿದ್ದ 35 ವರ್ಷದ ಅಂಜಲಿ ಹಾಗೂ ಆಕೆಯ ಪುತ್ರಿ ಯರಾದ ರಿಯಾ ಮತ್ತು ದಿಪ್ತಿಯನ್ನು ಉತ್ತಮ್ ತಂತಿ ರಕ್ಷಿಸಿದ್ದಾನೆ. ನದಿಯ ಕಡೆಗೆ ಬರುತ್ತಿದ್ದ ಉತ್ತಮ್ ತಂತಿ,  ತನ್ನ ಪುತ್ರಿಯರೊಂದಿಗೆ ನೀರಿಗೆ ಬೀಳುತ್ತಿದ್ದ ತಾಯಿಯನ್ನು ನೋಡಿದ್ದಾನೆ. ತಕ್ಷಣ ನದಿಗೆ ಬಿದ್ದು, ಎರಡನೇ  ಪ್ರಯತ್ನದಲ್ಲಿ ಅಂಜಲಿ ಹಾಗೂ ರಿಯಾಳನ್ನು ರಕ್ಷಿಸಿದ್ದಾನೆ. ಆದರೆ, ದಿಪ್ತಿ ರಕ್ಷಣೆ ತಡವಾದರಿಂದ ಆಕೆ  ನೀರುಪಾಲಾಗಿದ್ದಾರೆ.
5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕನಿಗೆ ಬೈಸಿಕಲ್ ಹಾಗೂ ಹಣಕಾಸಿನ ನೆರವು ನೀಡುವ  ಸೊನಿತ್ ಪುರ್ ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.
ತಾಯಿ ಹಾಗೂ ಮಗಳು ನೀರಲ್ಲಿ  ಕೊಚ್ಚಿ ಹೋಗುತ್ತಿದ್ದಾಗ ನದಿಗೆ ಬಿದ್ದು ಅವರನ್ನು ರಕ್ಷಿಸಿರುವ ಈತನ ಧೈರ್ಯವಂತ. ಆತನ ಕುಟುಂಬದವರು ಬಡವರಾಗಿದ್ದು, ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ನರ್ ಸಿಂಗ್ ಪವಾರ್ ಹೇಳಿದ್ದಾರೆ.
ಸನ್ಮಾನದ ಸಮಾರಂಭದಲ್ಲಿ ಆತ ದೇಶ ಕಾಯುವ ಯೋಧನಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾನೆ. ಸೇನೆಗೆ ಸೇರಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾನೆ. ಆತನ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ನೆರವು ನೀಡುವುದಾಗಿ ಪವಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com