ದಲಿತ ಯುವಕನ ಪ್ರೀತಿಸಿದ ಯುವತಿಗೆ ಶಾಸಕ ಅಪ್ಪನಿಂದಲೇ ಜೀವಬೆದರಿಕೆ, ವಿಡಿಯೋ ಮೂಲಕ ಅಳಲು!

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ತಂದೆಯಿಂದಲೇ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

Published: 11th July 2019 12:00 PM  |   Last Updated: 11th July 2019 11:41 AM   |  A+A-


Married to a Dalit, BJP MLA's daughter claims threat to life from dad

ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ

Posted By : SVN SVN
Source : PTI
ಬರೇಲಿ: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ತಂದೆಯಿಂದಲೇ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬಿಥಾರಿ ಚೈನ್​ಪುರ್​ ಕ್ಷೇತ್ರದ ಬಿಜೆಪಿ ಶಾಸಕನ ಮಗಳಾಗಿರುವ ಸಾಕ್ಷಿ ಮಿಶ್ರಾ (23 ವರ್ಷ) ಸಾಮಾಜಿಕ ಜಾಲತಾಣದಲ್ಲಿ ಬುಧವಾರ ವಿಡಿಯೋವೊಂದನ್ನು ಅಪ್ಲೋಡ್​ ಮಾಡಿದ್ದು, ಕಳೆದ ಗುರುವಾರ ಅಜಿತ್​ ಕುಮಾರ್ ​(29 ವರ್ಷ) ಎಂಬ ದಲಿತ ಯುವಕನನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. 

ಈ ಕುರಿತಂತೆ ವಿಡಿಯೋ ಮಾಡಿರುವ ಯುವತಿ ಸಾಕ್ಷಿ ಮಿಶ್ರಾ, 'ನಮ್ಮನ್ನು ಬಂಧಿಸುವುದಾಗಿ ಹಾಗೂ ಕೊಲ್ಲುವುದಾಗಿ ತಂದೆ, ಸಹೋದರ ಹಾಗೂ ಅವರ ಸಹವರ್ತಿಗಳು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಬರೇಲಿಯ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೆ, ತಮ್ಮ ತಂದೆ ನೆರವು ನೀಡದೇ ಸಾಮಾನ್ಯ ಜೀವನ ನಡೆಸಲು ತಮಗೆ ನೆರವಾಗುವಂತೆ ಬರೇಲಿಯ ಸಂಸದರು ಹಾಗೂ ಶಾಸಕರಲ್ಲಿ ಸಾಕ್ಷಿ ಮನವಿ ಮಾಡಿಕೊಂಡಿದ್ದಾಳೆ.

ಮತ್ತೊಂದು ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ವಿಡಿಯೋ ಮೂಲಕ ತಂದೆಯ ಬಳಿ ಕೇಳಿಕೊಂಡಿರುವ ಯುವತಿ, ಒಂದು ವೇಳೆ ನನಗಾಗಲಿ ಅಥವಾ ನನ್ನ ಗಂಡನಿಗಾಗಲಿ ಏನಾದರೂ ತೊಂದರೆಯಾದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಮಾತನಾಡಿರುವ ಬರೇಲಿ ಡಿಐಜಿ ಆರ್​.ಕೆ. ಪಾಂಡೆ, 'ಯುವತಿಯು ರಕ್ಷಣೆ ಕೋರಿರುವ ವಿಡಿಯೋ ನೋಡಿದ್ದೇನೆ. ದಂಪತಿಗೆ ರಕ್ಷಣೆ ನೀಡುವಂತೆ ಸ್ಥಳೀಯ ​ಎಸ್​ಪಿಗೆ ಸೂಚಿಸಿದ್ದೇನೆ. ಆದರೆ, ಯುವತಿ ತಾನಿರುವ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗಾಗಿ, ಅವರಿಗೆ ಪೊಲೀಸರು ಹೇಗೆ ರಕ್ಷಣೆ ನೀಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp