ರೈತರ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಸರ್ಕಾರ ಯಾವುದೇ ವಾಸ್ತವ ಕ್ರಮ ಕೈಗೊಂಡಿಲ್ಲ: ರಾಹುಲ್ ಗಾಂಧಿ

ದೇಶದಲ್ಲಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ದೇಶದಲ್ಲಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಬಯಸುತ್ತೇನೆ. ರೈತರಿಗೆ ಪರಿಹಾರ ಕಲ್ಪಿಸಲು ಮೊನ್ನೆ ಮಂಡಿಸಲಾದ ಬಜೆಟ್ ನಲ್ಲಿ ಕೂಡ ವಾಸ್ತವ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆ ಕಲಾಪದಲ್ಲಿ ಇಂದು ಮಾತನಾಡಿದ ಅವರು, ಕೇರಳ ಸರ್ಕಾರದ ನಿಷೇಧವನ್ನು ಪರಿಗಣಿಸಿ ಸಾಲವನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಬ್ಯಾಂಕುಗಳು ರೈತರಿಗೆ ಕಿರುಕುಳ ನೀಡದಂತೆ ಆರ್ ಬಿಐಗೆ ಕೇಂದ್ರ ಸರ್ಕಾರ ಆದೇಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ನನ್ನ ಕ್ಷೇತ್ರ ವಯನಾಡಿನಲ್ಲಿ ನಿನ್ನೆ ಒಬ್ಬ ರೈತ ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ನಿಂದ ತೆಗೆದುಕೊಂಡ ಸಾಲ ಹಿಂತಿರುಗಿಸದ್ದಕ್ಕೆ ವಯನಾಡಿನಲ್ಲಿ 8 ಸಾವಿರ ರೈತರಿಗೆ ಬ್ಯಾಂಕ್ ನೊಟೀಸ್ ನೀಡಲಾಗಿದೆ. ಸಂಬಂಧಪಟ್ಟ ಕಾಯ್ದೆಯಡಿ ಬ್ಯಾಂಕ್ ಸಾಲದ ಜೊತೆ ರೈತರ ಆಸ್ತಿಗಳನ್ನು ಜೋಡಣೆ ಮಾಡಿರುವುದರಿಂದ ಸಾಲದ ಮೊತ್ತ ಮಿತಿಮೀರಿ  ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com