ಹೈದರಾಬಾದ್: ಟಿಕ್ ಟಾಕ್ ವಿಡಿಯೋ ಹಾಕಲು ಯತ್ನಿಸಿದ ಯುವಕ ನೀರಲ್ಲಿ ಮುಳುಗಿ ಸಾವು!

ನೀರಿನಲ್ಲಿ ಆಡುತ್ತಿರುವ ವಿಡಿಯೋವನ್ನು ಟಿಕ್ ಟಾಕ್ ಗೆ ಅಪ್ ಲೋಡ್ ಮಾಡುವ ಯುವಕರ ಉತ್ಸಾವ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ.

Published: 12th July 2019 12:00 PM  |   Last Updated: 12th July 2019 03:49 AM   |  A+A-


Hyderabad: Youth drowns attempting to post TikTok video

ಹೈದರಾಬಾದ್: ಟಿಕ್ ಟಾಕ್ ವಿಡಿಯೋ ಹಾಕಲು ಯತ್ನಿಸಿದ ಯುವಕ ನೀರಲ್ಲಿ ಮುಳುಗಿ ಸಾವು!

Posted By : SBV SBV
Source : The New Indian Express
ಹೈದರಾಬಾದ್: ನೀರಿನಲ್ಲಿ ಆಡುತ್ತಿರುವ ವಿಡಿಯೋವನ್ನು ಟಿಕ್ ಟಾಕ್ ಗೆ ಅಪ್ ಲೋಡ್ ಮಾಡುವ ಯುವಕರ ಉತ್ಸಾವ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ. 

ಪೇಟ್ಬಶೀರಾಬಾದ್ ನಲ್ಲಿರುವ ಕೆರೆಯಲ್ಲಿ ಈ ಘಟನೆ ನಡೆದಿದ್ದು, ನರಸಿಂಹುಲು ಮೃತ ವ್ಯಕ್ತಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ತನ್ನ ಸೋದರ ಸಂಬಂಧಿ ಪ್ರಶಾಂತ್ ಜೊತೆ ತೆರಳಿದ್ದ ನರಸಿಂಹುಲು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಪ್ರಶಾಂತ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. 

ದುರ್ಘಟನೆ ನಡೆಯುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಟಿಕ್ ಟಾಕ್ ನಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, ದಿನಗೂಲಿ ನೌಕರನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ನರಸಿಂಹುಲು ಹಾಗೂ ಆತನ ಸಂಬಂಧಿ ಪ್ರಶಾಂತ್ ಗೆ ಈಜಲು ಬರುತ್ತಿರಲಿಲ್ಲ. ಮೃತ ವ್ಯಕ್ತಿಯ ಶರೀರ ದೊರೆತಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp