ರೆಸಾರ್ಟ್ ಸೇರಿದ ಮೂರೂ ಪಕ್ಷದ ಶಾಸಕರು: ಯಾವ ಪಕ್ಷದ ಶಾಸಕರು ಯಾವ ರೆಸಾರ್ಟ್ ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ

ಸಮ್ಮಿಶ್ರ ಸರ್ಕಾರವನ್ನು ವಿರೋಧಿಸಿ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು,...

Published: 12th July 2019 12:00 PM  |   Last Updated: 12th July 2019 09:59 AM   |  A+A-


Karnataka BJP MLAs leave for the Ramada resort from the state assembly

ಕ್ಷೇತ್ರ ಬಿಟ್ಟ ಶಾಸಕರು: ಯಾವ ಪಕ್ಷದ ಶಾಸಕರು ಯಾವ ರೆಸಾರ್ಟ್ ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ

Posted By : SBV SBV
Source : PTI
ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ವಿರೋಧಿಸಿ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ ಗೆ ಕಳಿಸಲು ಸಜ್ಜಾಗಿವೆ. 

ಜು.12 ರಂದು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಶಾಸಕರು ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ. 

ಕಾಂಗ್ರೆಸ್ ಶಾಸಕರು ಕ್ಲಾರ್ಕ್ಸ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿರಲಿದ್ದಾರೆ. ಇನ್ನು ಬಿಜೆಪಿ ಶಾಸಕರು ಬೆಂಗಳೂರಿನ ರಮಾಡ ಹೊಟೆಲ್ ನಲ್ಲಿರಲಿದ್ದಾರೆ. ಬಿಜೆಪಿ ಎರಡು ದಿನಗಳಿಗೆ 30 ರೂಮ್ ಗಳನ್ನು ಕಾಯ್ದಿರಿಸಿದೆ. 

ಪಕ್ಷದ ಎಲ್ಲಾ ಶಾಸಕರು ಹೊಟೆಲ್ ಗೆ ತೆರಳಲಿದ್ದು, ಸೋಮವಾರ ಆಗಮಿಸಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp