ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ

ಲೋಕಸಭೆ ರೈಲ್ವೆ ಸಚಿವಾಲಯದ ಅನುಧಾನ ಬೇಡಿಕೆಗಳ ಕುರಿತ ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ.

Published: 12th July 2019 12:00 PM  |   Last Updated: 12th July 2019 04:23 AM   |  A+A-


Lok Sabha sits till 11.58 pm to conclude debate on railways; Prahlad Joshi terms it a record

ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ

Posted By : SBV SBV
Source : UNI
ನವದೆಹಲಿ: ಲೋಕಸಭೆ  ರೈಲ್ವೆ ಸಚಿವಾಲಯದ  ಅನುಧಾನ ಬೇಡಿಕೆಗಳ ಕುರಿತ  ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ  ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ. 

ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಮೇಲಿನ ಚರ್ಚೆ ಗುರುವಾರ ರಾತ್ರಿ 11.58ರವರೆಗೆ ನಡೆಯಿತು. 

ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆ  ಸುಧೀರ್ಘವಾಗಿ ಕಲಾಪ ನಡೆಸಿದೆ ಎಂದು  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ  ಟ್ವೀಟ್ ಮಾಡಿದ್ದಾರೆ.ಲೋಕಸಭೆಯಲ್ಲಿ ರೈಲ್ವೆ ಅನುದಾನಗಳ ಬೇಡಿಕೆ ಮೇಲಿನ ಚರ್ಚೆ  ಗುರುವಾರ ಮಧ್ಯರಾತ್ರಿಯವರೆಗೆ ನಡೆಯಿತು. ತಮ್ಮ ಲೋಕಸಭಾ ಕ್ಷೇತ್ರಗಳಿಗೆ   ಅನುದಾನ ಹೆಚ್ಚಿಸಬೇಕು ಹಾಗೂ ರೈಲ್ವೆ ಕುರಿತ ಸರ್ಕಾರದ   ನೀತಿಯ ಕುರಿತು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರೈಲ್ವೆ ಸಚಿವಾಲಯದ  ಕಾರ್ಯನಿರ್ವಹಣೆ ಕುರಿತಂತೆ  ಬಹುತೇಕ ಎಲ್ಲ ಸದಸ್ಯರು ಮಾತನಾಡಲು ಹಾಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು  ಅವಕಾಶ ನೀಡಿದ ಸ್ಪೀಕರ್ ಓಂ ಬಿರ್ಲಾ  ಅವರಿಗೆ ರೈಲ್ವೆ ಸಚಿವ  ಪಿಯೂಷ್ ಗೋಯಲ್  ಧನ್ಯವಾದ ಸಲ್ಲಿಸಿದ್ದಾರೆ.

ಸದನದಲ್ಲಿ ತಮ್ಮ ಮುಂದೆ   ಒಟ್ಟು  99 ಸದಸ್ಯರು  ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆ ಕುರಿತು  ಮಾತನಾಡಿದರು,  ರೈಲ್ವೆ ಅನುದಾನ ಬೇಡಿಕೆಗಳ ಮಾತನಾಡಿದವರ ಪೈಕಿ  ನಾನು ನೂರನೇಯವನಾಗಿದ್ದೆ  ಎಂದು ಗೋಯಲ್ ಹೇಳಿದ್ದಾರೆ.

ರೈಲ್ವೆ ಬೇಡಿಕೆಗಳ ಬಗ್ಗೆ  ಸದಸ್ಯರ  ಭಾಷಣವನ್ನು   ಶಾಂತಿಯಿಂದ  ಆಲಿಸಿದ  ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಂಯಮವನ್ನು ಸಹ   ರೈಲ್ವೆ ಖಾತೆ ಸಂಪುಟ ಸಚಿವ ಪಿಯೂಷ್ ಗೋಯಲ್ ಕೊಂಡಾಡಿದ್ದಾರೆ. ಮಧ್ಯರಾತ್ರಿಯವರೆಗೂ  ಕಾರ್ಯನಿರ್ವಹಿಸಿದ  ಲೋಕಸಭಾ ಕಾರ್ಯಾಲಯ ಸಿಬ್ಬಂದಿ  ಹಾಗೂ ಮಾಧ್ಯಮ ಮಂದಿಗೆ  ಪಿಯೂಷ್ ಗೋಯಲ್ ಧನ್ಯವಾದ ಸಲ್ಲಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp