ಲಡಾಕ್ ನಲ್ಲಿ ಚೀನಾ ಅತಿಕ್ರಮಣ?: ಈ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು? ಇಲ್ಲಿದೆ ಮಾಹಿತಿ

ಲಡಾಕ್ ನಲ್ಲಿ ಚೀನಾ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂಬ ಬಗ್ಗೆ ವರದಿ ಪ್ರಕಟವಾಗಿದ್ದು ಈ ಕುರಿತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ಲಡಾಕ್ ನಲ್ಲಿ ಚೀನಾ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂಬ ಬಗ್ಗೆ ವರದಿ ಪ್ರಕಟವಾಗಿದ್ದು ಈ ಕುರಿತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟನೆ ನೀಡಿದ್ದಾರೆ. 

ಚೀನಾ ಲಡಾಕ್ ಪ್ರಾಂತ್ಯದಲ್ಲಿ ಅತಿಕ್ರಮಣ ಮಾಡಿಲ್ಲ ಎಂದು ಬಿಪಿನ್ ರಾವತ್ ಸ್ಪಷ್ಟನೆ ನೀಡಿದ್ದಾರೆ. ಜು.06 ರಂದು ದಲೈ ಲಾಮ ಜನ್ಮದಿನಾಚರಣೆ ಅಂಗವಾಗಿ ಟಿಬೇಟಿಯನ್ನರು ಟಿಬೇಟ್ ನ ಧ್ವಜಗಳನ್ನು ಹಾರಿಸಿದ್ದರು. ಈ ಘಟನೆಯ ಬಳಿಕ ಎಲ್ಒಸಿಯಲ್ಲಿ ಚೀನಾ ಯೋಧರು ಅತಿಕ್ರಮ ಪ್ರವೇಶ ಮಾಡಿದ್ದಾರೆಂಬ ವರದಿ ಪ್ರಕಟವಾಗಿತ್ತು.

ಎಲ್ ಒಸಿ ಬಳಿ ಚೀನಾ ಯೋಧರು ಬಂದು ಗಸ್ತು ತಿರುಗುತ್ತಾರೆ. ನಮ್ಮ ಪ್ರದೇಶದಲ್ಲಿ ಸಮಾರಂಭ ನಡೆಯುತ್ತಿದ್ದಾಗ ಚೀನಾ ಯೋಧರು ಏನಾಗುತ್ತಿದೆ ಎಂಬುದನ್ನು ಗಮನಿಸಿದ್ದಾರೆ. ಅತಿಕ್ರಮ ಪ್ರವೇಶ ಏನೂ ನಡೆದಿಲ್ಲ, ಎಲ್ಲವೂ ಸಹಜವಾಗಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com