ಗೋವಾ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮೂವರಿಗೆ ಮಂತ್ರಿಗಿರಿ, ಮಧ್ಯಾಹ್ನ 3ಕ್ಕೆ ಸಚಿವರಾಗಿ ಪ್ರಮಾಣ

ಗೋವಾದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ತಮ್ಮ ಸಂಪುಟವನ್ನು ಪುನರ್ರಚಿಸಲು ತೀರ್ಮಾನಿಸಿದ್ದಾರೆ.
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್
ಪಣಜಿ: ಗೋವಾದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ತಮ್ಮ ಸಂಪುಟವನ್ನು ಪುನರ್ರಚಿಸಲು ತೀರ್ಮಾನಿಸಿದ್ದಾರೆ. 
ಮಿತ್ರಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಯ ಮೂವರು ಸದಸ್ಯರನ್ನು ಮತ್ತು ಸ್ವತಂತ್ರ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ. ಇನ್ನು ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
40 ಸದಸ್ಯರ ಸದನದಲ್ಲಿ ಾಂಗ್ರೆಸ್ ನ ಹತ್ತು ಶಾಸಕರು ಕೈ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದು ಕಮಲ ಪಾಳಯದ ಬಲವನ್ನು 27ಕ್ಕೇರುವಂತೆ ಮಾಡಿದೆ. ಇದರಿಂದ ಈ ಮುನ್ನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇಶಿಕ ಪಕ್ಷವಾದ ಜಿಎಫ್‌ಪಿಯನ್ನು ಕೈಬಿಟ್ಟು ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಲು ಸಿಎಂ ಸಾವಂತ್ ತೀರ್ಮಾನಿಸಿದ್ದಾರೆ.
ನಾಲ್ಕು ಹೊಸ ಮಂತ್ರಿಗಳನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಮೂವರು ಜಿಎಫ್‌ಪಿ ಶಾಸಕರು ಮತ್ತು ಸ್ವತಂತ್ರ ಶಾಸಕ ರೋಹನ್ ಕೌಂಟೆ  ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಕೋರಲಾಗಿದೆ.
ಬುಧವಾರ ಬಿಜೆಪಿಗೆ ಸೇರಿದ್ದ ಚಂದ್ರಕಾಂತ್ ಕಾವ್ಲೇಕರ್, ಫಿಲಿಪ್ ನೆರಿ ರೊಡ್ರಿಗಸ್, ಅಟಾನಾಸಿಯೊ ಮೊನ್ಸೆರಾಟ್ಟೆ ಮತ್ತು ಉಪ ಸ್ಪೀಕರ್ ಮೈಕೆಲ್ ಲೋಬೊ ಅವರು ಮಧ್ಯಾಹ್ನ ರಾಜಭವನದಲ್ಲಿ ಮಾಣ ವಚನ ಸ್ವೀಕರಿಸಲಿದ್ದಾರೆ.
ಉಪ ಸ್ಪೀಕರ್ ರಾಜೀನಾಮೆ
ಗೋವಾ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ವಿಧಾನ ಸಭೆ ಉಪ ಸ್ಪೀಕರ್ (ಉಪ ಸಭಾಪತಿ) ಮೈಕೆಲ್ ಲೋಬೊ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಲೋಬೊ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ  ಸಲ್ಲಿಕೆ ಮಾಡಿದ್ದಾರೆ.
"ನಾನು ಸಚಿವ ಸ್ಥಾನ ಪಡೆದುಕೊಳ್ಳುತ್ತಿರುವ ಕಾರಣ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ"ಲೋಬೊ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com