ಪಂಜಾಬ್ ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಿದ ನವಜೋತ್ ಸಿಂಗ್ ಸಿಧು

ಪಂಜಾಬ್ ಮುಖ್ಯಮಂತ್ರಿಗಳಿಗೆ ಇಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಟ್ವೀಟರ್ ನಲ್ಲಿ ನವಜೋತ್ ಸಿಂಗ್ ಸಿಧು ಬರೆದುಕೊಂಡಿದ್ದಾರೆ.
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಂಪುಟದಿಂದ  ನವಜೋತ್ ಸಿಂಗ್ ಸಿಧು ಹೊರಬರಲಿದ್ದಾರೆ ಎಂಬ ಬಗ್ಗೆ ಇದ್ದಂತಹ ಉಹಾಪೋಹಗಳಿಗೆ ಕೊನೆಗೂ ತೆರೆ ಬಿದಿದೆ.  ಪಂಜಾಬ್ ನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ನವಜೋತ್ ಸಿಂಗ್ ಸಿಧು ಇಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಗಳಿಗೆ ಇಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಟ್ವೀಟರ್ ನಲ್ಲಿ ನವಜೋತ್ ಸಿಂಗ್ ಸಿಧು ಬರೆದುಕೊಂಡಿದ್ದಾರೆ.
ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಜಕಾರಣಿಯಾಗಿರುವ ನವಜೋತ್ ಸಿಂಗ್ ಸಿಧು ನಿನ್ನೆ ದಿನ ಅಮರೀಂದರ್ ಸಿಂಗ್ ಬದಲಿಗೆ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. 
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ತುಂಬಿಕೊಂಡು ವಿವಾದ ಸೃಷ್ಟಿಸಿ ಬಂದ ನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮನಸ್ತಾಪ ಬೆಳೆದಿತ್ತು.
 ಇತ್ತೀಚಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇದು ಇನ್ನಷ್ಟು ಬೆಳೆದಿತ್ತು.  ಚಂಡೀಗಢ ಅಥವಾ ಅಮೃತಸರದಿಂದ ಸ್ಪರ್ಧಿಸಲು ಟಿಕೆಟ್  ದೊರೆಯದಿರಲು ಅಮರೀಂದರ್ ಸಿಂಗ್ ಅವರೇ ಕಾರಣ ಎಂದು ಸಿಧು ಅವರ ಹೆಂಡತಿ ಆರೋಪಿಸಿದ್ದರು.
ನವಜೋತ್ ಸಿಂಗ್ ಸಿಧು ರಾಜೀನಾಮೆ ಕುರಿತಂತೆ ಪ್ರತಿಕ್ರಿಯಿಸಿರುವ ಅಮರೀಂದರ್ ಸಿಂಗ್,  ಸಿಧು ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಂಪುಟ ಪುನಾರಚನೆ ಬಳಿಕ ಪ್ರಮುಖವಾದ ಖಾತೆಯನ್ನೇ ನೀಡಲಾಗಿದೆ.ಇದರಿಂದಾಗಿ ಸಂಪುಟದಿಂದ ಹೊರಹೋಗಲು ನಿರ್ಧರಿಸಿದ್ದಾರೆ. ರಾಜೀನಾಮೆ ಪತ್ರವನ್ನು ಕಚೇರಿಗೆ ಕಳುಹಿಸುವಂತೆ ಹೇಳಿದ್ದೆ. ಬಂದಿದ್ದರೆ ಏನು ಮಾಡಬಹುದು ಎಂಬುದನ್ನು ನೋಡುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com