ಹಿಮಾಚಲ ಪ್ರದೇಶ ಕಟ್ಟಡ ಕುಸಿತ: ಯೋಧರೂ ಸೇರಿದಂತೆ ಮೃತರ ಸಂಖ್ಯೆ 13ಕ್ಕೆ ಏರಿಕೆ

ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹಿಮಾಚಲಪ್ರದೇಶದ ರಾಜಧಾನಿ ಶಿಮ್ಲಾ ಸಮೀಪದ ಸೋಲಾನ್ ನಲ್ಲಿ 4 ಅಂತಸ್ತುಗಳ ಕಟ್ಟಡ ಕುಸಿದ ಪರಿಣಾಮ 12 ಮಂದಿ ಯೋಧರೂ ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದಾರೆ.
ಕುಸಿದ ತಟ್ಟಡ
ಕುಸಿದ ತಟ್ಟಡ
ಶಿಮ್ಲಾ: ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹಿಮಾಚಲಪ್ರದೇಶದ ರಾಜಧಾನಿ ಶಿಮ್ಲಾ ಸಮೀಪದ ಸೋಲಾನ್ ನಲ್ಲಿ 4 ಅಂತಸ್ತುಗಳ ಕಟ್ಟಡ ಕುಸಿದ ಪರಿಣಾಮ 12 ಮಂದಿ ಯೋಧರೂ ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದಾರೆ.
ಅಂತೆಯೇ ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಲಾನ್‍ನ ನಹನ್‍ ಕುಮಾರ್ ಹಟ್ಟಿ ರಸ್ತೆಯಲ್ಲಿನ ಈ ಕಟ್ಟಡ ನಿನ್ನೆ ರಾತ್ರಿ ಕುಸಿದು ಬಿತ್ತು. ರೆಸ್ಟೊರೆಂಟ್ ಸೇರಿದಂತೆ 4  ಮಹಡಿಗಳು ಈ ಕಟ್ಟಡದಲ್ಲಿದ್ದವು. ಈ ದುರ್ಘಟನೆಯಲ್ಲಿ 12 ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾನೆ ಎಂದು ಸೋಲಾನ್ ಪೊಲೀಸ್ ವರಿಷ್ಠಾಧಿಕಾರಿ ಮಧುಸೂಧನ್ ತಿಳಿಸಿದ್ದಾರೆ.
ಕುಸಿದ ಕಟ್ಟಡದ ಅವಶೇಷದಲ್ಲಿ ಇನ್ನೂ ಕೆಲ ಮಂದಿ ಸಿಲುಕಿರುವ ಶಂಕೆಯಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ. ಕಟ್ಟಡ ಕುಸಿದು ಬಿದ್ದ  ಸಂದರ್ಭದಲ್ಲಿ 42ಕ್ಕೂ ಹೆಚ್ಚು ಮಂದಿ ಅಲ್ಲಿದ್ದರು. ಈ ಪೈಕಿ 7 ಜನ ಮೃತಪಟ್ಟಿದ್ದು, ಇನ್ನು ಕೆಲ ಯೋಧರು ಸೇರಿದಂತೆ 28 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಎಂದು ಸೋಲಾನ್ ಉಪವಿಭಾಗೀಯ ದಂಡಾಧಿಕಾರಿ ರೋಹಿತ್ ರಾಥೋಡ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com