ಶಿವ ದೇವಾಲಯ ಆವರಣದಲ್ಲಿ'ತ್ರಿವಳಿ ಕೊಲೆ' ಬೆಚ್ಚಿ ಬಿದ್ದ ಆಂಧ್ರ, ನರಬಲಿಯ ಶಂಕೆ

ಅನಂತಪುರ ಜಿಲ್ಲೆಯ ಕೊರ್ತಿಕೊಟಾ ಗ್ರಾಮದ ಶಿವಾ ದೇವಾಲಯ ಆವರಣದಲ್ಲಿ ಕತ್ತು ಸೀಳಿದ ರೀತಿಯಲ್ಲಿ ಬಿದಿದ್ದ ಮೂವರ ಮೃತದೇಹವನ್ನು ಕಂಡ ಭಕ್ತರು ಬೆಚ್ಚಿ ಬಿದಿದ್ದಾರೆ.

Published: 16th July 2019 12:00 PM  |   Last Updated: 16th July 2019 04:14 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : Online Desk
ಹೈದ್ರಾಬಾದ್:  ಅನಂತಪುರ ಜಿಲ್ಲೆಯ ಕೊರ್ತಿಕೊಟಾ ಗ್ರಾಮದ ಶಿವಾ ದೇವಾಲಯ ಆವರಣದಲ್ಲಿ ಕತ್ತು ಸೀಳಿದ ರೀತಿಯಲ್ಲಿ ಬಿದಿದ್ದ ಮೂವರ ಮೃತದೇಹವನ್ನು ಕಂಡ ಭಕ್ತರು ಬೆಚ್ಚಿ ಬಿದಿದ್ದಾರೆ. 

ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತದೇಹ ಈ ರೀತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು 70 ವರ್ಷದ ಶಿವರಾಮಿ ರೆಡ್ಡಿ, ಆತ ತಂಗಿ 75 ವರ್ಷದ ಕಡಪಲ್ಲ ಕಮಲಮ್ಮ ಹಾಗೂ 70 ವರ್ಷದ ಸತ್ಯ ಲಕ್ಷ್ಮೀಯಮ್ಮ ಎಂದು ಗುರುತಿಸಲಾಗಿದೆ.

 ದೇವಾಲಯದ ಒಳಗೆ ಇರುವ 'ಶಿವಲಿಂಗ'ದ ಮೇಲೆ ಭಕ್ತರು ರಕ್ತ ಚಿಮುಕಿಸಿರುವುದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹತ್ಯೆಯಾಗಿರುವ ಮೂವರ ಪೈಕಿ ರೆಡ್ಡಿ ದೇವಾಲಯದ ಆರ್ಚಕನಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ

ದೇವಾಲಯದ ಹುಂಡಿ ಹೊಡೆಯಲು ಬಂದಿರುವ ಕಳ್ಳರಿಂದ ಈ ಕೊಲೆ ನಡೆದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ನರಬಲಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp