ಹೋಗೋವಾಗ ಇಬ್ಬರು, ಬರೋವಾಗ ಒಬ್ಬ, ಪತ್ನಿ ಮಿಸ್ ಆಗಿದ್ದೇಗೆ? ಪೊಲೀಸರಿಗೆ ಪತಿ ಹೇಳಿದ್ದೇನು?

ಕನ್ನಡದಲ್ಲಿ ಬಿಡುಗಡೆಯಾಗಿದ್ದ ಬಾ ನಲ್ಲೆ ಮಧುಚಂದ್ರಕೆ ಚಿತ್ರ ಸೂಪರ್ ಹಿಟ್ ಆಗಿತ್ತು. ಕ್ರೈಂ-ಸಸ್ಪೆನ್ಸ್ ಚಿತ್ರ ಅನೈತಿಕ ಸಂಬಂಧದ ಕಥೆಯಾಗಿದ್ದು ಹನಿಮೂನ್ ಹೆಸರಲ್ಲಿ ಪತ್ನಿಯನ್ನು ಕರೆದುಕೊಂಡು ಹೋದ...

Published: 16th July 2019 12:00 PM  |   Last Updated: 16th July 2019 08:21 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಮುಂಬೈ: ಕನ್ನಡದಲ್ಲಿ ಬಿಡುಗಡೆಯಾಗಿದ್ದ ಬಾ ನಲ್ಲೆ ಮಧುಚಂದ್ರಕೆ ಚಿತ್ರ ಸೂಪರ್ ಹಿಟ್ ಆಗಿತ್ತು. ಕ್ರೈಂ-ಸಸ್ಪೆನ್ಸ್ ಚಿತ್ರ ಅನೈತಿಕ ಸಂಬಂಧದ ಕಥೆಯಾಗಿದ್ದು ಹನಿಮೂನ್ ಹೆಸರಲ್ಲಿ ಪತ್ನಿಯನ್ನು ಕರೆದುಕೊಂಡು ಹೋದ ಪತಿ ಪರ್ವತದ ಮೇಲಿನಿಂದ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದ. ಇದೀಗ ಇದೇ ರೀತಿಯ ಅಪರಾಧವೊಂದನ್ನು ನಿಜ ಜೀವನದಲ್ಲಿ ಪತಿಯೊಬ್ಬ ಮಾಡಿದ್ದಾನೆ. 

ಮಧ್ಯಪ್ರದೇಶ ಮೂಲದ ಬಾಬುಲಾಲ್ ಕೇಲ್ ಪತ್ನಿಯನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಸಪ್ತಶೃಂಗಿ ದೇವಾಲಯಕ್ಕೆ  ಕರೆದುಕೊಂಡು ಬಂದಿದ್ದಾನೆ. ದೇವರ ದರ್ಶನದ ಬಳಿಕ ನಂದೂರಿ ಪರ್ವತ ಶಿಖರಕ್ಕೆ ಬಂದಿದ್ದಾರೆ. ಅಲ್ಲಿ ಇಬ್ಬರ ನಡುವೆ ಜಗಳವಾಗಿದ್ದು ಕೋಪದಲ್ಲಿ ಆಕೆಯನ್ನು ಪರ್ವತದಿಂದ ತಳ್ಳಿ ಕೊಲೆ ಮಾಡಿದ್ದಾನೆ. 

ಬಾಬುಲಾಲ್ ತನ್ನ ಪತ್ನಿಯನ್ನು ಪರ್ವತದಿಂದ ತಳ್ಳುತ್ತಿದ್ದುದ್ದನ್ನು ಸ್ಥಳೀಯರೊಬ್ಬರು ನೋಡಿದ್ದಾನೆ. ಕೂಡಲೇ ಅಲ್ಲಿದ್ದ ಕೆಲ ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಸದ್ಯ ಪೊಲೀಸರು ಕವಿತಾಳ ಮೃತದೇಹವನ್ನು ಕಣಿವೆಯಿಂದ ವಶಪಡಿಸಿಕೊಂಡಿದ್ದು ಬಾಬುಲಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp