ಮಿರಾಜ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಪೈಲಟ್ ಪತ್ನಿ ವಾಯುಪಡೆ ಸೇರ್ಪಡೆ ಸಾಧ್ಯತೆ

ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್ ತೆಲಂಗಾಣದಲ್ಲಿನ ಭಾರತೀಯ ವಾಯುಪಡೆ ಅಕಾಡೆಮಿ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಗರಿಮಾ ಅಬ್ರೋಲ್
ಗರಿಮಾ ಅಬ್ರೋಲ್
ನವದೆಹಲಿ: ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಸ್ಕ್ವಾಡ್ರನ್  ಲೀಡರ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್  ವಾರಾಣಸಿಯಲ್ಲಿ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ತೆಲಂಗಾಣದಲ್ಲಿನ ಭಾರತೀಯ ವಾಯುಪಡೆ ಅಕಾಡೆಮಿ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈ ವರ್ಷ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಿರಾಜ್ 200 ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಹಾಗೂ ಸಿದ್ದಾರ್ಥ ನೇಗಿ ಮೃತಪಟ್ಟಿದ್ದರು.
ವಿಮಾನ ಟೇಕಾಪ್ ಆದ ನಂತರ ಲ್ಯಾಡಿಂಗ್  ಪ್ರಯತ್ನ ವಿಫಲಗೊಂಡು,  ವಿಮಾನದ ಮುಂಭಾಗ ಮುರಿದು ರನ್ ವೇ ಬಳಿಯಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು ಎಂಬುದು ವಾಯುಪಡೆಯ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿತ್ತು.
ಆದಾಗ್ಯೂ, ಈ ದುರಂತದ ಬಗ್ಗೆ ತನಿಖೆ ನಡೆಸಬೇಕೆಂದು ಸಮೀರ್ ಅಬ್ರೋಲ್ ಅವರ ಸಹೋದರ ಸುಶಾಂತ್ ಅಬ್ರೋಲ್  ಕೇಂದ್ರಸರ್ಕಾರವನ್ನು ಒತ್ತಾಯಿಸಿದ್ದರು.
ಇಂತಹ ಪ್ರಕರಣಗಳು ಮರುಕಳಿಸಬಾರದು, ನನ್ನ ಪತಿ ಸಾವಿಗೆ ನ್ಯಾಯ ಸಿಗಬೇಕು, ಘಟನೆಗೆ ಕಾರಣರಾದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗರೀಮಾ ಸಿಂಗ್  ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com