ಜಾಕೀರ್ ಹುಸೇನ್, ಸೋನಲ್ ಮಾನ್ಸಿಂಗ್
ಜಾಕೀರ್ ಹುಸೇನ್, ಸೋನಲ್ ಮಾನ್ಸಿಂಗ್

ಜಾಕೀರ್ ಹುಸೇನ್, ಸೋನಲ್ ಮಾನ್ಸಿಂಗ್ ಸೇರಿ ನಾಲ್ವರು ಸಂಗೀತ ನಾಟಕ ಅಕಾಡೆಮಿ ಫೆಲೋ ಆಗಿ ಆಯ್ಕೆ

ಪ್ರದರ್ಶನ ಕಲೆಗಳ ಕ್ಷೇತ್ರದ ನಾಲ್ವರು ಪ್ರಖ್ಯಾತ ಕಲಾವಿದರಾದ ರಾಜ್ಯಸಭೆ ಸದಸ್ಯೆ ಹಾಗೂ ನೃತ್ಯ ಕಲಾವಿದೆ ಸೋನಲ್ ಮಾನ್ಸಿಂಗ್, ಜಾಕೀರ್ ಹುಸೇನ್, ಜತಿನ್ ಗೋಸ್ವಾಮಿ, ಮತ್ತು ಕೆ.ಕಲ್ಯಾಣ ಸುಂದರಂ ಪಿಳ್ಳೈ.....
ನವದೆಹಲಿ: ಪ್ರದರ್ಶನ ಕಲೆಗಳ ಕ್ಷೇತ್ರದ ನಾಲ್ವರು ಪ್ರಖ್ಯಾತ ಕಲಾವಿದರಾದ ರಾಜ್ಯಸಭೆ  ಸದಸ್ಯೆ ಹಾಗೂ ನೃತ್ಯ ಕಲಾವಿದೆ ಸೋನಲ್ ಮಾನ್ಸಿಂಗ್, ಜಾಕೀರ್ ಹುಸೇನ್, ಜತಿನ್ ಗೋಸ್ವಾಮಿ, ಮತ್ತು ಕೆ.ಕಲ್ಯಾಣ ಸುಂದರಂ ಪಿಳ್ಳೈ ಅವರನ್ನು ಸಂಗೀತ ನಾಟಕ ಅಕಾಡೆಮಿಯ ಸಹವರ್ತಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಅಸ್ಸಾಂ ನ ಗುವಾಹಟಿಯಲ್ಲಿ ಜೂನ್ 26ರಂದು ನಡೆದ ಸಂಗೀತ ನಾಟಕ, ನೃತ್ಯ ಮತ್ತು ನಾಟಕಗಳ ಅಕಾಡೆಮಿಯ ಸಾಮಾನ್ಯ ಮಂಡಳಿಯ ಸಭೆಯಲ್ಲಿ ಸಂಗೀತ, ನೃತ್ಯ, ರಂಗಭೂಮಿ, ಸಾಂಪ್ರದಾಯಿಕ, ಜಾನಪದ, ಬುಡಕಟ್ಟು ಸಂಗೀತ ಮತ್ತಿತರ ಕ್ಷೇತ್ರಗಳಿಂದ 44 ಕಲಾವಿದರನ್ನು  ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. 
 ಅಕಾಡೆಮಿ ಪ್ರಶಸ್ತಿಯ ಗೌರವವನ್ನು 1952 ರಿಂದ ನೀಡುತ್ತಾ ಬರುತ್ತಿದೆ. ಈ ಗೌರವಗಳು ಅತ್ಯುನ್ನತ ಗುಣಮಟ್ಟದ ಶ್ರೇಷ್ಠತೆ ಮತ್ತು ಸಾಧನೆಗಳನ್ನು ಸಂಕೇತಿಸುವುದಲ್ಲದೆ, ಉನ್ನತ ಸಾಧನೆ ಮಾಡಲು ಕಲಾವಿದರು ಪ್ರೇರೇಪಿಸುತ್ತವೆ.  
ಅಕಾಡೆಮಿ ಫೆಲೋ ಗೌರವ ಮೂರು ಲಕ್ಷ ನಗದು ಹಾಗೂ ಅಕಾಡೆಮಿ ಪ್ರಶಸ್ತಿ ಒಂದು ಲಕ್ಷ ನಗದನ್ನು ಒಳಗೊಂಡಿದೆ. ಸಂಗೀತ ನಾಕಟ ಅಕಾಡೆಮಿ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ

Related Stories

No stories found.

Advertisement

X
Kannada Prabha
www.kannadaprabha.com