ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ

ಈ ವರ್ಷದ ಏಪ್ರಿಲ್ 1 ರ ವೇಳೆಗೆ 189 ಹೊಸ ರೈಲ್ವೆ ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ
ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ
ನವದೆಹಲಿ: ಈ ವರ್ಷದ ಏಪ್ರಿಲ್ 1 ರ ವೇಳೆಗೆ 189 ಹೊಸ ರೈಲ್ವೆ ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ. 
ಪ್ರಶ್ನೋತ್ತರ ವೇಳೆಯಲ್ಲಿ ಹೊಸ ಮಾರ್ಗಗಳು ಮತ್ತು ಮೇಲ್ಸೇತುವೆಗಳ ನಿರ್ಮಾಣ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಏಪ್ರಿಲ್ 1 ರ ವೇಳೆಗೆ 2555 ಕಿಲೋಮೀಟರ್ ಉದ್ದದ 189 ಹೊಸ ಮಾರ್ಗ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ಅದರ ವೆಚ್ಚ 3,74,753 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ.   ಇದರಡಿ ಕರ್ನಾಟಕದ 20 ಹೊಸ ಮಾರ್ಗ ಯೋಜನೆಗಳು ಸೇರಿದ್ದು 26,393 ಕೋಟಿ ರೂಪಾಯಿ ವೆಚ್ಚದ 2,501.72 ಕಿಲೋಮೀಟರ್ ಉದ್ದದ ಕಾಮಗಾರಿ ಸೇರಿದೆ. ಈ ಪೈಕಿ 244.55 ಕಿಲೋಮೀಟರ್ ಉದ್ದದ ಮಾರ್ಗ ನಿರ್ಮಾಣಕ್ಕೆ ಮಾರ್ಚ್ ವರೆಗೆ 2927.63 ಕೋಟಿ ರೂ ವೆಚ್ಚವಾಗಿದೆ. ವೆಚ್ಚ ಹಂಚಿಕೆ ಆಧಾರದಲ್ಲಿ 42 ಮೇಲ್ಸೇತುವೆಗಳ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈಲ್ವೆ ಯೋಜನೆಗಳಿಗೆ ವಲಯವಾರು ಅನುಮತಿ ನೀಡಲಾಗಿದ್ದು ಮಾರ್ಚ್ ವರೆಗೆ ಹೊಸ ಮಾರ್ಗ ಯೋಜನೆಗಳಿಗೆ 76,917 ಕೋಟಿ ರೂಪಾಯಿ ವೆಚ್ಚವಾಗಿವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com