2008ರ ಬ್ರಿಟೀಷ್ ಯುವತಿ ಕೊಲೆ ಪ್ರಕರಣ: ಓರ್ವ ಅಪರಾಧಿ - ಬಾಂಬೆ ಹೈಕೋರ್ಟ್ ಗೋವಾ ಪೀಠ

2008 ರ ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಈಡನ್ ಕೀಲಿಂಗ್ ಸಾವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಬುಧವಾರ ಆರೋಪಿ ವ್ಯಕ್ತಿ ಅಪರಾಧಿ ಎಂದು ತೀರ್ಪು ನೀಡಿದೆ.

Published: 17th July 2019 12:00 PM  |   Last Updated: 17th July 2019 08:35 AM   |  A+A-


Scarlett Keeling

ಸ್ಕಾರ್ಲೆಟ್ ಈಡನ್ ಕೀಲಿಂಗ್

Posted By : RHN RHN
Source : The New Indian Express
ಪಣಜಿ: 2008 ರ ಬ್ರಿಟಿಷ್ ಯುವತಿ  ಸ್ಕಾರ್ಲೆಟ್ ಈಡನ್ ಕೀಲಿಂಗ್ ಸಾವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಬುಧವಾರ ಓರ್ವ ಆರೋಪಿ ವ್ಯಕ್ತಿ ಅಪರಾಧಿ ಎಂದು ತೀರ್ಪು ನೀಡಿದೆ.

ಫೆಬ್ರವರಿ 18, 2008 ರಂದು ಗೋವಾದ ಅಂಜುನಾ ಬೀಚ್‌ನಲ್ಲಿ ಸ್ಕಾರ್ಲೆಟ್ ಆಕೆಯ ದೇಹದ ಮೇಲೆ ಸಣ್ಣ ಘಾಯಗಳೊಡನೆ ಶವವಾಗಿ ಪತ್ತೆಯಾಗಿದ್ದಳು.

ಇಬ್ಬರು ಗೋವಾ ಸ್ಥಳೀಯ ನಿವಾಸಿಗಳಾದ ಸ್ಯಾಮ್ಸನ್ ಡಿಸೋಜ ಮತ್ತು ಪ್ಲ್ಯಾಸಿಡೋ ಕಾರ್ವಾಲ್ಹೋ ಎಂಬುವವರು ಮಾದಕವಸ್ತು ಸೇವಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿ ಬಳಿಕ ಕೊಂದಿದ್ದಾರೆ ಎಂದು ಆರ್ಫ ಕೇಳಿಬಂದಿತ್ತು.

ಇದಕ್ಕೆ ಮುನ್ನ ಗೋವಾ ಮಕ್ಕಳ ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ ಸ್ಕಾರ್ಲೆಟ್ ಪರವಾಗಿ ಅವರ ವಕೀಲರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಬಾಂಬೆ ಹೈಕೋರ್ಟ್ ಗೋವಾ ಪೀಠ ಇಂದು ತೀರ್ಪು ಪ್ರಕಟಿಸಿದೆ. ಇನ್ನು ಜುಲೈ 19 ರಂದು ತಿರ್ಪಿನ ಕುರಿತಂತೆ  ವಾದ ವಿವಾದಗಳನ್ನು ಆಲಿಸಲಾಗುತ್ತದೆ.

ಆದಾಗ್ಯೂ, ಪ್ಲ್ಯಾಸಿಡೋ ಕಾರ್ವಾಲ್ಹೋ ಅವರ ಖುಲಾಸೆಯನ್ನು  ಹೈಕೋರ್ಟ್ ಎತ್ತಿಹಿಡಿದಿದೆ. ಆರಂಭದಲ್ಲಿ ಗೋವಾ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಸ್ಕಾರ್ಲೆಟ್ ಅವರ ತಾಯಿ ಫಿಯೋನಾ ಮ್ಯಾಕ್‌ಕೌನ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp