ಗುರು ಪೂರ್ಣಿಮೆಯಂದೇ ಚಂದ್ರಗ್ರಹಣ! 149 ವರ್ಷಗಳ ಬಳಿಕ ಅಪೂರ್ವ ಕ್ಷಣ!

149 ವರ್ಷಗಳ ಬಳಿಕ ಶತಮಾನದ ಅತೀ ದೀರ್ಘಾವಧಿಯ ಚಂದ್ರಗ್ರಹಣ ಆಗಸದಲ್ಲಿ ಗೋಚರಿಸಿದೆ.
ಚಂದ್ರಗ್ರಹಣ
ಚಂದ್ರಗ್ರಹಣ
ಬೆಂಗಳೂರು: 149 ವರ್ಷಗಳ ಬಳಿಕ ಶತಮಾನದ ಅತೀ ದೀರ್ಘಾವಧಿಯ ಚಂದ್ರಗ್ರಹಣ ಆಗಸದಲ್ಲಿ ಗೋಚರಿಸಿದೆ. 
ಭಾರತದಲ್ಲಿ ರಾತ್ರಿ 1.31ರಿಂದ ಬೆಳಗ್ಗಿನ ಜಾವ 4.31ರವರೆಗೆ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ವರ್ಷ ಈಗಾಗಲೇ ಮೂರು ಗ್ರಹಣ ಆಗಿದೆ. ಎರಡು ಸೂರ್ಯಗ್ರಹಣ ಮತ್ತೊಂದು ಚಂದ್ರಗ್ರಹಣ. ಕೇವಲ ಎರಡು ವಾರದ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು. 
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿ ಬರುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುತ್ತದೆ . ಹೀಗಾಗಿ ಚಂದ್ರನ ಮೇಲೆ ಸೂರ್ಯನ ಕಿರಣ ಬೀಳುವುದೇ ಇಲ್ಲ. 
ಭಾರತ ಸೇರಿ ಏಷ್ಯಾಖಂಡ, ಆಸ್ಟ್ರೇಲಿಯಾ, ಆಫ್ರಿಕಾ ಖಂಡ, ಯುರೋಪ್, ದಕ್ಷಿಣ ಅಮೆರಿಕಾದಲ್ಲಿ ಗೋಚರಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com