ಮುಸ್ಲಿಮರ ವಿರುದ್ಧ ಪೋಸ್ಟ್: ಜಾಮೀನು ಬೇಕು ಅಂದ್ರೆ ಕುರಾನ್ ನ 5 ಪ್ರತಿಗಳನ್ನು ಹಂಚಲು ಹೇಳಿದ ರಾಂಚಿ ಕೋರ್ಟ್!

ಮುಸ್ಲಿಮರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ 19 ವರ್ಷದ ಯುವತಿಗೆ ಜಾಮೀನು ನೀಡಬೇಕಾದರೆ ಆಕೆ ಕುರಾನ್ ನ 5 ಪ್ರತಿಗಳನ್ನು ಹಂಚಬೇಕೆಂದು ರಾಂಚಿ ಕೋರ್ಟ್ ಆದೇಶ ನೀಡಿದೆ.
ಮುಸ್ಲಿಮರ ವಿರುದ್ಧ ಪೋಸ್ಟ್: ಜಾಮೀನು ಬೇಕು ಅಂದ್ರೆ ಕುರಾನ್ ನ 5 ಪ್ರತಿಗಳನ್ನು ಹಂಚಲು ಹೇಳಿದ ರಾಂಚಿ ಕೋರ್ಟ್!
ಮುಸ್ಲಿಮರ ವಿರುದ್ಧ ಪೋಸ್ಟ್: ಜಾಮೀನು ಬೇಕು ಅಂದ್ರೆ ಕುರಾನ್ ನ 5 ಪ್ರತಿಗಳನ್ನು ಹಂಚಲು ಹೇಳಿದ ರಾಂಚಿ ಕೋರ್ಟ್!
ರಾಂಚಿ: ಮುಸ್ಲಿಮರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ 19 ವರ್ಷದ ಯುವತಿಗೆ ಜಾಮೀನು ನೀಡಬೇಕಾದರೆ ಆಕೆ ಕುರಾನ್ ನ 5 ಪ್ರತಿಗಳನ್ನು ಹಂಚಬೇಕೆಂದು ರಾಂಚಿ ಕೋರ್ಟ್ ಆದೇಶ ನೀಡಿದೆ. 
ರಾಂಚಿಯಲ್ಲಿರುವ ಪ್ರತ್ಯೇಕ 5 ಸಂಸ್ಥೆಗಳಿಗೆ ತಲಾ ಒಂದು ಪ್ರತಿಗಳನ್ನು ಹಂಚುವ ಷರತ್ತಿಗೆ ಒಪ್ಪಿದರೆ ಮಾತ್ರ ಯುವತಿಗೆ ಜಾಮೀನು ಮಂಜೂರು ಮಾಡುವುದಾಗಿ ಕೋರ್ಟ್ ಹೇಳಿದೆ. 
ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶ ಮನೀಷ್ ಕುಮಾರ್ ಸಿಂಗ್ ಜಾಮೀನು ಮಂಜೂರು ಮಾಡಿದ ನಂತರ ರಿಚಾ ಭಾರ್ತಿ ಎಂಬ ಯುವತಿಗೆ ಈ ಆದೇಶ ನೀಡಿದ್ದಾರೆ. 
ಪೊಲೀಸರ ಸಮ್ಮುಖದಲ್ಲಿ ಸ್ಥಳೀಯ ಅಂಜುಮನ್ ಸಮಿತಿ ಸೇರಿದಂತೆ ಬೇರೆ ಬೇರೆ ಗ್ರಂಥಾಲಯಗಳಿಗೆ 5 ಕುರಾನ್ ಪ್ರತಿಗಳನ್ನು ನೀಡಬೇಕೆಂದು ಕೋರ್ಟ್ ಹೇಳಿದೆ.  15 ದಿನಗಳಲ್ಲಿ ಕುರಾನ್ ಪ್ರತಿಗಳನ್ನು ಹಂಚಿರುವುದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕೆಂದು ಕೋರ್ಟ್ ಹೇಳಿದೆ. 
ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಭಾರ್ತಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹ ಪೋಸ್ಟ್ ಹಾಕಿದ್ದರು. ಇದರ ವಿರುದ್ಧ ಅಂಜುಮನ್ ಸಮಿತಿ ಪೊಲೀಸ್ ಗೆ ದೂರು ನೀಡಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com