ಚಂದ್ರಯಾನ-2: ತಾಂತ್ರಿಕ ದೋಷ ಸರಿಪಡಿಸಿದ ಇಸ್ರೋ, ಮುಂದಿನ ವಾರ ಉಡಾವಣೆ ಸಾಧ್ಯತೆ

ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಬಹು ನಿರೀಕ್ಷಿತ ಚಂದ್ರಯಾನ-2 ಮುಂದಿನ ವಾರ...
ಚಂದ್ರಯಾನ-2
ಚಂದ್ರಯಾನ-2
ಬೆಂಗಳೂರು: ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಬಹು ನಿರೀಕ್ಷಿತ ಚಂದ್ರಯಾನ-2 ಮುಂದಿನ ವಾರ ಉಡಾವಣೆಯಾಗುವ ಸಾಧ್ಯತೆ ಇದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಿಎಸ್‌ಲ್‌ವಿ-ಎಂಕೆಐ2 ರಾಕೇಟ್ ನ ತಾಂತ್ರಿಕ ದೋಷ ಸರಿಪಡಿಸಿದ್ದು, ಜುಲೈ 20 ಅಥವಾ 23ರಂದು ಚಂದ್ರಯಾನ-2 ಉಡಾವಣೆಗೆ ಸಮಯ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಹೆಸರು ಹೇಳು ಇಚ್ಛಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸೋಮವಾರ ನಸುಕಿನ ಜಾವ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. 
ರಾಕೆಟ್‌ನಲ್ಲಿ ಕ್ರಯೋಜೆನಿಕ್ ಇಂಧನ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆ ರದ್ದುಪಡಿಸಲಾಗಿತ್ತು. 
ವಿಜ್ಞಾನಿಗಳು-ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿದ್ದು , ಉಡ್ಡಯನಕ್ಕೆ ಮುಂದಿನ ದಿನಾಂಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com