ಉತ್ತರ ಪ್ರದೇಶ: ರಸ್ತೆಯಲ್ಲಿ ನಮಾಜ್ ವಿರೋಧಿಸಲು ಹನುಮಾನ್ ಚಾಲಿಸ ಪಠಣ

ರಸ್ತೆ ನಡುವೆ ನಮಾಜ್ ನ್ನು ಪಠಿಸುವುದನ್ನು ವಿರೋಧಿಸುವುದಕ್ಕಾಗಿ ರಸ್ತೆಯಲ್ಲಿಯೇ ಹನುಮಾನ್ ಚಾಲಿಸ ಪಠಣ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Published: 17th July 2019 12:00 PM  |   Last Updated: 17th July 2019 11:59 AM   |  A+A-


'Hanuman Chalisa' recited on UP road to oppose 'namaaz' on streets

ಉತ್ತರ ಪ್ರದೇಶ: ರಸ್ತೆಯಲ್ಲಿ ನಮಾಜ್ ನ್ನು ವಿರೋಧಿಸಲು ಹನುಮಾನ್ ಚಾಲಿಸ ಪಠಣ

Posted By : SBV SBV
Source : IANS
ಲಖನೌ: ರಸ್ತೆ ನಡುವೆ ನಮಾಜ್ ನ್ನು ಪಠಿಸುವುದನ್ನು ವಿರೋಧಿಸುವುದಕ್ಕಾಗಿ ರಸ್ತೆಯಲ್ಲಿಯೇ ಹನುಮಾನ್ ಚಾಲಿಸ ಪಠಣ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಹಿಂದು ಯುವ ವಾಹಿನಿ (ಹೆಚ್ ವೈ ವಿ) ನಡು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಹನುಮಾನ್ ಚಾಲಿಸ ಪಠಣ ಮಾಡಿದ್ದಾರೆ. 

ನಡು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ಮುಸ್ಲಿಂ ಬಾಂಧವರು ನಿಲ್ಲಿಸುವವರೆಗೂ ಪ್ರತಿ ಮಂಗಳವಾರ ತಾವೂ ನಡು ರಸ್ತೆಯಲ್ಲೇ ಹನುಮಾನ್ ಚಾಲಿಸ ಪಠಣ ಮಾಡುವುದನ್ನು ಮುಂದುವರೆಸುವುದಾಗಿ ಹೆಚ್ ವೈವಿ ಸಂಘಟನೆಯ ಸದಸ್ಯರು ತಿಳಿಸಿದ್ದಾರೆ. 

ಮುಸ್ಲಿಮರು ಪ್ರತಿ ಶುಕ್ರವಾರದಂದು ನಡು ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಸಮಸ್ಯೆ ಉಂಟಾಗುತ್ತಿದೆ. ಅವರು ಈ ಅಭ್ಯಾಸವನ್ನು ಬಿಟ್ಟರೆ ನಾವೂ ಹನುಮಾನ್ ಚಾಲಿಸಾ ಪಠಣ ನಿಲ್ಲಿಸುವುದಾಗಿ ಹೇಳಿದ್ದಾರೆ.  ಘಟನೆ ಬಗ್ಗೆ ಪೊಲೀಸರು ಮೌನ ವಹಿಸಿದ್ದು, ನಡು ರಸ್ತೆಯಲ್ಲಿ ನಮಾಜ್ ಮಾಡುವುದರ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಮ್ಮ ಮಧ್ಯಪ್ರವೇಶ ಇಲ್ಲ ಎಂದು ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp