22 ವರ್ಷದ ಹಳೇಯ ಫೋಟೋ ಹಾಕಿ 'ಸ್ಯಾರಿ ಟ್ವಿಟ್ಟರ್' ಗೆ ಸಾಥ್ ಕೊಟ್ಟ ಪ್ರಿಯಾಂಕಾ ಗಾಂಧಿ!

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ‘ಸ್ಯಾರಿ ಟ್ವಿಟ್ಟರ್’ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ....
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ‘ಸ್ಯಾರಿ ಟ್ವಿಟ್ಟರ್’ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ.
ಗುಲಾಬಿ ಬಣ್ಣದ ಬನಾರಸಿ ಸೀರೆಯುಟ್ಟು ಕುಳಿತಿರೋ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ ಸ್ಯಾರಿ ಟ್ವಿಟ್ಟರ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಇದು 22 ವರ್ಷದ ಹಳೆಯ ಫೋಟೋವಾಗಿದ್ದು ನನ್ನ ಮದುವೆಯ ದಿನದಂದು ಬೆಳಗ್ಗಿನ ಪೂಜೆಗೆ ಕುಳಿತ ಸಂದರ್ಭದಲ್ಲಿ ತೆಗೆದು ಫೋಟೋ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕ ಗಾಂಧಿಯವರು ಈ ಹ್ಯಾಶ್ ಟ್ಯಾಗ್ ಬಳಸಿ ಫೋಟೋ ಹಾಕಿದ ನಿಮಿಷಕ್ಕೆ ಸುಮಾರು 4 ಸಾವಿರ ಲೈಕ್ಸ್ ಬಂದಿದ್ದು, 100ಕ್ಕೂ ಹೆಚ್ಚು ಕಾಂಮೆಂಟ್ ಗಳು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com