ತಮಿಳುನಾಡು: ಎರಡು ನೂತನ ಜಿಲ್ಲೆಗಳನ್ನು ಘೋಷಿಸಿದ ಸಿಎಂ ಪಳನಿಸ್ವಾಮಿ

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಎರಡು ಅವರು ಗುರುವಾರ ತೆಂಕಸಿ ಮತ್ತು ಚೆಂಗಲ್ ಪೇಟೆಗಳನ್ನು ಹೊಸ ಜಿಲ್ಲೆಗಳಾಗಿ ಘೋಷಿಸಿದ್ದಾರೆ.
ಇ ಪಳನಿಸ್ವಾಮಿ
ಇ ಪಳನಿಸ್ವಾಮಿ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಎರಡು ಅವರು ಗುರುವಾರ ತೆಂಕಸಿ ಮತ್ತು ಚೆಂಗಲ್ ಪೇಟೆಗಳನ್ನು ಹೊಸ ಜಿಲ್ಲೆಗಳಾಗಿ ಘೋಷಿಸಿದ್ದಾರೆ.
ತಿರುನಲ್ವೇಲಿ ಮತ್ತು ಕಾಂಚೀಪುರಂ ಜಿಲ್ಲೆಗಳನ್ನು ವಿಭಜಿಸುವ ಮೂಲಕ ಈ ಎರಡು ಜಿಲ್ಲೆಗಳನ್ನು ರಚಿಸಿರುವುದಾಗಿ ಇಂದು ವಿಧಾನಸಭೆಗೆ ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ಒಟ್ಟು 35ಕ್ಕೆ ಏರಿಕೆಯಾಗಿದೆ. 
ಇತ್ತೀಚೆಗೆ ಕಲ್ಲಕುರಿಚಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಲಾಗಿತ್ತು. ನಿಯಮ 110 ರ ಅಡಿಯಲ್ಲಿ ರೂಪುಗೊಂಡ ಜಿಲ್ಲೆಗಳಿಗೆ ಹೊಸ ಅಧಿಕಾರಿಗಳನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘ಮುಖ್ಯಮಂತ್ರಿ ವಿಶೇಷ ಕುಂದುಕೊರತೆ ಪರಿಹಾರ ಯೋಜನೆ’ ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ  ಜಾರಿಗೆ ಬರಲಿದ್ದು, ಯೋಜನೆ ಪ್ರಕಾರ, ಅಧಿಕೃತ ತಂಡವು ಪ್ರತಿ ವಾರ್ಡ್ ಮತ್ತು ಗ್ರಾಮಗಳಿಗೆ ನಿರ್ಧಿಷ್ಟವಾಗಿ ಭೇಟಿ ನೀಡಲಿವೆ. ಆಗಸ್ಟ್ ಅಂತ್ಯದ ಮೊದಲ ದಿನ ಅವರು ಜನರಿಂದ ಕುಂದುಕೊರತೆಗಳ ಅರ್ಜಿಗಳನ್ನು ಸಂಗ್ರಹಿಸಿ, ಕಂಪ್ಯೂಟರ್ ಗಳಲ್ಲಿ ಅಪ್ ಲೋಡ್ ಮಾಡುತ್ತಾರೆ ಎಂದರು.
ನಂತರ ಅರ್ಜಿಯನ್ನು ಒಂದು ವಾರದ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಲಾಗುತ್ತದೆ ಹಾಗೂ ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com