'ಅಲ್ಲಿ ಹೋರಾಟ ಮಾಡಿ,ಇಲ್ಲಿ ಬೇಡ' ಕರ್ನಾಟಕ ಸಂಸದೆಗೆ ಲೋಕಸಭೆ ಸ್ಪೀಕರ್ ಸಲಹೆ

ತಮಿಳುನಾಡು ಜೊತೆಗಿನ ಹಲವು ವರ್ಷಗಳಿಂದ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಿದ್ದಾಗ ಅಲ್ಲಿ ಹೋರಾಟ ಮಾಡಿ ಇಲ್ಲಿ ಮಾಡಬೇಡಿ ಎಂದು ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಲೋಕಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ
ನವದೆಹಲಿ: ತಮಿಳುನಾಡು ಜೊತೆಗಿನ ಹಲವು ವರ್ಷಗಳಿಂದ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಿದ್ದಾಗ ಅಲ್ಲಿ ಹೋರಾಟ ಮಾಡಿ ಇಲ್ಲಿ ಮಾಡಬೇಡಿ ಎಂದು  ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಲೋಕಸಭೆ  ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ರಾಜ್ಯದಲ್ಲಿನ ವಿವಿಧೆಡೆ ಕುಡಿಯುವ ನೀರಿನ ಕೊರತೆ ಕುರಿತಂತೆ ಶೋಭಾ ಕರಂದ್ಲಾಜೆ ಮಾತನಾಡುವಾಗ  ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತಿದ್ದ ನೆರೆಯ ತಮಿಳುನಾಡು ಸದಸ್ಯರನ್ನು ನೋಡುತ್ತಾ  ತಮಿಳುನಾಡು ಜೊತೆಗಿನ ಕಾವೇರಿ ವಿವಾದವನ್ನು ಪ್ರಸ್ತಾಪಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ , ಅಲ್ಲಿ ಹೋರಾಡಿ ಇಲ್ಲಿ ಅಲ್ಲ ಎಂದು ಹೇಳುವ ಮೂಲಕ ಸದನ ನೆಗೆಗಡಲಲ್ಲಿ ತೇಲಿತು. ರಾಜ್ಯಗಳ ನಡುವಿನ ಬಹುತೇಕ ನದಿ ವಿವಾದಗಳು ನ್ಯಾಯಾಧೀಕರಣ ಅಥವಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ನದಿ ವಿವಾದಗಳನ್ನು ಸಮನ್ವಯತೆಯಿಂದ ಇತ್ಯರ್ಥಪಡಿಸಿಕೊಳ್ಳಬೇಕೆಂದು ಶೇಖಾವತ್ ಸಲಹೆ ನೀಡಿದರು.  ಜಲ ಶಕ್ತಿ ಅಭಿಯಾನದಡಿಯಲ್ಲಿ  ಅಂತರ್ಜಲ ಕುಸಿತಗೊಂಡಿರುವ 256 ಜಿಲ್ಲೆಗಳಲ್ಲಿ ಒಟ್ಟಾರೇ 1 ಸಾವಿರದ 592 ಬ್ಲಾಕ್ಸ್ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com