ಐಟಿಯಿಂದ ಮಾಯಾವತಿ ಸಹೋದರನಿಗೆ ಸೇರಿದ 400 ಕೋಟಿ ರು. ಮೌಲ್ಯದ ಪ್ಲಾಟ್ ಜಪ್ತಿ

ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ 400 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಪ್ಲಾಟ್ ಅನ್ನು ಆದಾಯ...

Published: 18th July 2019 12:00 PM  |   Last Updated: 18th July 2019 07:17 AM   |  A+A-


I-T attaches Rs 400 crore 'benami' plot in Noida belonging to Mayawati's brother, his wife

ಮಾಯಾವತಿ

Posted By : LSB LSB
Source : PTI
ನವದೆಹಲಿ: ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ 400 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಪ್ಲಾಟ್ ಅನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾವತಿ ಸಹೋದರ ಆನಂದ್ ಕುಮಾರ್ ಹಾಗೂ ಅವರ ಪತ್ನಿ ವಿಚಿತರ್ ಲತಾ ಅವರಿಗೆ ಸೇರಿದ ಏಳು ಎಕರೆ ಪ್ಲಾಟ್ ಅನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗಷ್ಟೇ ಮಾಯಾವತಿ ಅವರು ಆನಂದ್ ಕುಮಾರ್ ಅವರನ್ನು ಬಿಎಸ್ ಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಅಕ್ರಮ ಆಸ್ತಿ ಗಳಿಕೆ ತಡೆ ಕಾಯ್ದೆ 1988ರಡಿ ಜುಲೈ 16ರಂದು ಕುಮಾರ್ ಪ್ಲಾಟ್ ಜಪ್ತಿಗೆ ಆದೇಶ ನೀಡಲಾಗಿತ್ತು. ಈ ಆಸ್ತಿಯ ಮಾರುಕಟ್ಟೆ ಮೌಲ್ಯ 400 ಕೋಟಿ ರುಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp