ಫೇಸ್ ಆಪ್ ಚಾಲೆಂಜ್ ನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ 10 ವರ್ಷ ಹಿಂದೆಯೇ ಮಾಡಿದ್ದರಂತೆ!

ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಆಗಾಗ ಹಾಸ್ಯಕರ ವಿಷಯಗಳನ್ನು ಬರೆದು ...
ಸ್ಮೃತಿ ಇರಾನಿ
ಸ್ಮೃತಿ ಇರಾನಿ
ನವದೆಹಲಿ: ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಆಗಾಗ ಹಾಸ್ಯಕರ ವಿಷಯಗಳನ್ನು ಬರೆದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಯಾಗುವುದುಂಟು. 
ಇತ್ತೀಚೆಗೆ ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಫೇಸ್ ಆಪ್ ಚಾಲೆಂಜ್ ಎಂಬ ಪದ. ಇಂದಿನ ಯುವಕರು, ಸೆಲೆಬ್ರಿಟಿಗಳು ವಯಸ್ಸಾದ ನಂತರ ಹೇಗೆ ಕಾಣಬಹುದು ಎಂದು ಫೇಸ್ ಆಪ್ ಮೂಲಕ ವಯಸ್ಸಾದಂತೆ ತೋರಿಸುವ ಅವರ ಫೋಟೋಗಳನ್ನು ಹಾಕಿ ತಮಾಷೆ ಮಾಡುವುದು. 
ಸ್ಮೃತಿ ಇರಾನಿ ಮೂಲತಃ ನಟಿ, ಹಿಂದಿ ಕಿರುತೆರೆಯಲ್ಲಿ ಮಿಂಚಿದವರು. ಫೇಸ್ ಆಪ್ ಚಾಲೆಂಜ್ ಗೆ ಒಂದು ಕುತೂಹಲಕಾರಿ ಟ್ವಿಸ್ಟ್ ಕೊಟ್ಟಿದ್ದು, ಅವರು ತಮ್ಮ ಪ್ರಸಿದ್ಧ 'ಕ್ಯೊಂಕಿ ಸಾಸ್ ಭಿ ಕಭಿ ಬಹು ತಿ' ಧಾರಾವಾಹಿಯಲ್ಲಿ ತುಳಸಿ ಪಾತ್ರದ ವಯಸ್ಸಾದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ಕೊಟ್ಟಿರುವ ಅಡಿಬರಹ ಸೆಳೆಯುತ್ತದೆ. ಅಂದರೆ ಸೆಲೆಬ್ರಿಟಿಗಳು ಆಪ್ ಮೂಲಕ ಈಗ ಮಾಡುತ್ತಿರುವ ಚಾಲೆಂಜ್ ನ್ನು 10 ವರ್ಷಗಳ ಹಿಂದೆ ನಿಜವಾಗಿ ಮಾಡಿದ್ದೆ ಎಂದು ತಮಾಷೆಯಾಗಿ ಸ್ಮೃತಿ ಇರಾನಿ ಹೇಳಿಕೊಂಡಿದ್ದಾರೆ. 
ಏಕ್ತಾ ಕಪೂರ್ ಫೇಸ್ ಆಪ್ ಚಾಲೆಂಜ್ ಮಾಡಿಸಿ ನಿಮ್ಮ ಮುಂದೆ ತೋರಿಸಿದಾಗ ಹೀಗೆ ಕಂಡೆ ಎಂದು ಧಾರಾವಾಹಿಯ ವಯಸ್ಸಾದ ತುಳಸಿ ಪಾತ್ರದ ಫೋಟೋ ಹಾಕಿದ್ದಾರೆ.
ಸ್ಮೃತಿ ಇರಾನಿಯವರ ಈ ಫೋಟೋಕ್ಕೆ ಸಾವಿರಾರು ಲೈಕ್, ಕಮೆಂಟ್ ಗಳು ಬಂದಿವೆ. ಫೇಸ್ ಆಪ್ ಚಾಲೆಂಜ್ ನಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 80ರ ದಶಕದಲ್ಲಿ ಹೇಗೆ ಇದ್ದಿರಬಹುದು ಎಂಬ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಅದು ಸಾಕಷ್ಟು ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com