ಖ್ಯಾತ ಜನಪ್ರಿಯ ಆ್ಯಪ್ ಟಿಕ್-ಟಾಕ್, ಹೆಲೋ ಮೇಲೆ ಮತ್ತೆ ನಿಷೇಧ..? ಕೇಂದ್ರ ಸರ್ಕಾರ ಹೇಳಿದ್ದೇನು?

ಯುವ ಪೀಳಿಗೆಯ ಆಕರ್ಷಿಸಿರುವ ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ಗಳಾದ ಟಿಕ್ ಟಾಕ್ ಮತ್ತು ಹೆಲೋ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಚಿಂತನೆಯಲ್ಲಿ ತೊಡಗಿದೆಯೇ.. ಹೌದು ಎನ್ನುತ್ತಿವೆ ಮೂಲಗಳು..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಯುವ ಪೀಳಿಗೆಯ ಆಕರ್ಷಿಸಿರುವ ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ಗಳಾದ ಟಿಕ್ ಟಾಕ್ ಮತ್ತು ಹೆಲೋ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಚಿಂತನೆಯಲ್ಲಿ ತೊಡಗಿದೆಯೇ.. ಹೌದು ಎನ್ನುತ್ತಿವೆ ಮೂಲಗಳು..
ಹೌದು.. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಜನಪ್ರಿಯ ಆ್ಯಪ್ ಗಳನ್ನು ನಿಷೇಧಿಸುವ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಎರಡೂ ಆ್ಯಪ್ ಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಈ ವರೆಗೂ ಈ ಸಂಸ್ಥೆಗಳಿಂದ ಇದಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಎರಡೂ ಆ್ಯಪ್ ನ ಆಡಳಿತ ಸಂಸ್ಥೆಯಗಳ ವಿರುದ್ಧ ತೀವ್ರ ಗರಂ ಆಗಿದೆ.
ಟಿಕ್ ಟಾಕ್ ಮತ್ತು ಹೆಲೋ ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ ಉತ್ತರ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಕೆ ಕೂಡ ನೀಡಿದೆ ಎನ್ನಲಾಗಿದೆ.
ರಾಷ್ಟ್ರೀಯ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ್ ಈ ಎರಡು ಅಪ್ಲಿಕೇಷನ್ ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿ ಪ್ರಧಾನಿ ಕಾರ್ಯಾಲಯಕ್ಕೆ ಈ ಹಿಂದೆ ದೂರು ಸಲ್ಲಿಸಿತ್ತು. ಹೀಗಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿಈ ಸಂಸ್ಥೆಗಳಿಗೆ 21 ಪ್ರಶ್ನೆಗಳಿಗೆ ಉತ್ತರ ಬಯಸಿ ನೋಟಿಸ್ ನೀಡಿದೆ.
ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ 11 ಸಾವಿರಕ್ಕೂ ಅಧಿಕ ತಿರುಚಿದ ರಾಜಕೀಯ ಜಾಹೀರಾತು ಪ್ರಸಾರದಿಂದ ಭಾರಿ ಮೊತ್ತದ ಹಣ ಪಾವತಿಯಾಗಿದೆ ಎಂಬ ಆರೋಪದ ಮೇಲೆ ತೆರಿಗೆ ಸಚಿವಾಲಯ ಹೆಲೊನಿಂದ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com