ಪ್ರವಾಹ ಪೀಡಿತ ಅಸ್ಸಾಂಗಾಗಿ ಒಗ್ಗೂಡಿದ ಕ್ರಿಕೆಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಮನವಿ..!

ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಭಾರತದ ಅಸ್ಸಾಂ, ಬಿಹಾರ ರಾಜ್ಯಗಳ ಸಂತ್ರಸ್ಥರಿಗೆ ನೆರವಾಗುವಂತೆ ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಮನನಿ ಮಾಡಿದ್ದಾರೆ.

Published: 19th July 2019 12:00 PM  |   Last Updated: 19th July 2019 10:55 AM   |  A+A-


Assam floods: Bollywood, Cricket stars come out in support of victims

ಸಂಗ್ರಹ ಚಿತ್ರ

Posted By : SVN SVN
Source : Online Desk
ಗುವಾಹತಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಭಾರತದ ಅಸ್ಸಾಂ, ಬಿಹಾರ ರಾಜ್ಯಗಳ ಸಂತ್ರಸ್ಥರಿಗೆ ನೆರವಾಗುವಂತೆ ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಮನನಿ ಮಾಡಿದ್ದಾರೆ.

ಅಸ್ಸಾಂನಲ್ಲಿ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಅಸ್ಸಾಂ ಮತ್ತು ಬಿಹಾರದಲ್ಲಿ ಸಾವಿಗೀಡಾದವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಭೀಕರ ಮಳೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಅಸ್ಸಾಂ ಮತ್ತು ಬಿಹಾರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಅಸ್ಸಾಂನ 33 ಜಿಲ್ಲೆಗಳು ಮತ್ತು ಬಿಹಾರದ 28 ಜಿಲ್ಲೆಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 

ಪರಿಣಾಮ ಸುಮಾರು 54 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹ ಪೀಡಿತರಾಗಿದ್ದು, ಅವರಿಗೆ ನೆರವಾಗುವಂತೆ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಕೇವಲ ಅಸ್ಸಾಂ ಪ್ರವಾಹ ಸಂತ್ರಸ್ಥರ ಕುರಿತು ಟ್ವೀಟ್ ಮಾಡಿದರೆ ಸಾಲದು.. ಅವರಿಗೆ ಅಗತ್ಯ ನೆರವು ನೀಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ. ಅಂತೆಯೇ ಬಾಲಿವುಡ್ ನಟರಾದ ಶ್ರದ್ಧಾಕಪೂರ್, ವಿವೇಕ್ ಒಬೆರಾಯ್, ಖ್ಯಾತ ಸ್ಪ್ರಿಂಟರ್ ಹಿಮಾದಾಸ್, ಪ್ರಿಯಾಂಕಾ ಚೋಪ್ರಾ ಕೂಡ ಅಸ್ಸಾಂ ಪ್ರವಾಹ ಸಂತ್ರಸ್ಥರಿಗೆ ನೆರವಾಗುವಂತೆ ಕರೆ ನೀಡಿದ್ದಾರೆ.

ಇತ್ತ ಖ್ಯಾತ ಕ್ರಿಕೆಟಿಗರೂ ಕೂಡ ಪ್ರವಾಹ ಪೀಡಿತರಿಗೆ ನೆರವು ನೀಡುವಂತೆ ಕೋರಿದ್ದು, ಕನ್ನಡಿಗ ಕೆಎಲ್ ರಾಹುಲ್, ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ, ಹರ್ಭಜನ್ ಸಿಂಗ್ ಕೂಡ ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಸಂತ್ರಸ್ಥರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp