ಸ್ವಾತಂತ್ರ್ಯೋತ್ಸವ ಭಾಷಣ: ಜನರಿಂದ ಸಲಹೆ ಕೇಳಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.

Published: 19th July 2019 12:00 PM  |   Last Updated: 19th July 2019 03:07 AM   |  A+A-


PM Narendra Modi invites suggestions for his Independence Day speech

ನರೇಂದ್ರ ಮೋದಿ

Posted By : LSB LSB
Source : PTI
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ  ಸಲಹೆಗಳನ್ನು ಆಹ್ವಾನಿಸಿದ್ದಾರೆ. 

ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ತಾವು ಮಾಡುವ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಕೇಳಿರುವ ಪ್ರಧಾನಿ ಮೋದಿ ಅವರು, ಇದು ಜನ ಸಾಮಾನ್ಯರು ವಿಚಾರಗಳನ್ನು ಈಡೀ ದೇಶಕ್ಕೆ ತಿಳಿಸಲು ಅವಕಾಶ ಕಲ್ಪಿಸಲಿದೆ ಎಂದು ಹೇಳಿದ್ದಾರೆ.

ಆಗಸ್ಟ್ 15ರ ನನ್ನ ಭಾಷಣಕ್ಕೆ ನಿಮ್ಮ ಅಮೂಲ್ಯವಾದ ವಿಚಾರಗಳನ್ನು ನಾನು ಆಹ್ವಾನಿಸುತ್ತಿದ್ದೇನೆ. ನಿಮ್ಮ ವಿಚಾರಗಳನ್ನು ದೇಶದ 130 ಕೋಟಿ ಜನ ಆಲಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಜನರಿಂದ ಸಲಹೆಗಳನ್ನು ಸ್ವೀಕರಿಸಲು ನಮೋ ಆ್ಯಪ್ "ಓಪನ್ ಫೋರಮ್" ಸೃಷ್ಟಿ ಮಾಡಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp