ಪ್ರಿಯಾಂಕಾ ವಾದ್ರಾ ಪೊಲೀಸರ ವಶಕ್ಕೆ, ಯೋಗಿ ಸರ್ಕಾರಕ್ಕೆ ಅಭದ್ರತೆಯ ಭೀತಿ: ರಾಹುಲ್ ಕಿಡಿ

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಬಂಧಿಸುವ ಮೂಲಕ ರಾಜ್ಯ ಸರ್ಕಾರವು ತನ್ನ ಅಧಿಕಾರ ಮೀರಿ ವರ್ತನೆ ಮಾಡುತ್ತಿದೆ ಹಾಗೂ ಅಸ್ಥಿರತೆಯಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ
ಪ್ರಿಯಾಂಕಾ ಬಂಧನ, ಅಸ್ಥಿರತೆಯಲ್ಲಿ ಯೋಗಿ ಸರ್ಕಾರ: ರಾಹುಲ್ ಕಿಡಿ
ಪ್ರಿಯಾಂಕಾ ಬಂಧನ, ಅಸ್ಥಿರತೆಯಲ್ಲಿ ಯೋಗಿ ಸರ್ಕಾರ: ರಾಹುಲ್ ಕಿಡಿ
ನವದೆಹಲಿ: ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಬಂಧಿಸುವ ಮೂಲಕ  ರಾಜ್ಯ ಸರ್ಕಾರವು ತನ್ನ  ಅಧಿಕಾರ ಮೀರಿ ವರ್ತನೆ ಮಾಡುತ್ತಿದೆ ಹಾಗೂ  ಅಸ್ಥಿರತೆಯಲ್ಲಿ ಸಾಗುತ್ತಿದೆ  ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. 
ಪ್ರಿಯಾಂಕ ಅವರ ಬಂಧನ ನೋಡಿದರೆ ರಾಜ್ಯ ಅಸ್ಥಿರತೆಯಲ್ಲಿ  ಬದುಕುತ್ತಿದೆ,  ನಡೆಯುತ್ತಿದೆ ಎಂಬುದು  ಸ್ಪಷ್ಟವಾಗಿದೆ  ಎಂದು ಅವರು ಹೇಳಿದರು.
ಭೂಮಿ  ಬಿಟ್ಟುಕೊಡಲು ನಿರಾಕರಿಸಿದ 10 ಆದಿವಾಸಿ ರೈತರು ಮೇಲೆ ಗುಂಡು ಹಾರಿಸಿರುವುದನ್ನು ನೋಡಿದರೆ ಯುಪಿಯಲ್ಲಿ ಬಿಜೆಪಿ ಸರ್ಕಾರ  ಹೆಚ್ಚು  ಅಭದ್ರತೆಯ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿದೆ ಎಂದು ಗಾಂಧಿ ಹೇಳಿದರು.
ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶ ಪೊಲೀಸರು ವಾರಣಾಸಿಯ ನಾರಾಯಣಪುರ, ನೆರೆಯ ಮಿರ್ಜಾಪುರ ಗಡಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು  ಇತ್ತೀಚಿನ ಹಿಂಸಾಚಾರದಿಂದ  ಸಂಬಂಧಿಕರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದಾಗ  ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . 
ಪ್ರಿಯಾಂಕ ಬಂಧನ ಖಂಡಿಸಿದ ಪಕ್ಷದ  ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉತ್ತರ ಪ್ರದೇಶ ಸರ್ಕಾರ  ಕಾನೂನು ಸುವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು .
ಪ್ರಿಯಾಂಕಾ ಅವರ ಬಂಧನವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ ಮತ್ತು ಉತ್ತರ ಪ್ರದೇಶ ಸರ್ಕಾರವು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಮತ್ತು ಲಿಖಿತ ಆದೇಶವಿಲ್ಲದೆ  ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದೆ. 
ಉತ್ತರ ಪ್ರದೇಶದಲ್ಲಿ  ಪೊಲೀಸ್  ವಶಕ್ಕೆ  ಪ್ರಿಯಾಂಕಾ ಗಾಂಧಿ
ಭೂ ವಿವಾದಕ್ಕೆ ಸಂಬಂಧಿಸಿದಂತೆ ಸೋನಭದ್ರಾ ಜಿಲ್ಲೆಯಲ್ಲಿ  ನಡೆದ   ಪೊಲೀಸ್ ಗೋಲಿಬಾರ್ ನಲ್ಲಿ  ಗಾಯಗೊಂಡವರನ್ನು ಭೇಟಿ ಮಾಡಲು ತೆರಳುತ್ತಿದ್ದ  ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ  ವಾದ್ರಾ ಅವರನ್ನು  ವಾರಣಾಸಿಯ ನಾರಾಯಣ್ ಪುರದಲ್ಲಿ  ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಸೋನಭದ್ರಾದಲ್ಲಿ ಆಸ್ತಿ ವಿವಾದ ಕುರಿತ ಘರ್ಷಣೆಯ  ವೇಳೆ ಪೊಲೀಸರು  ನಡೆಸಿದ ಗೋಲಿಬಾರ್ ನಲ್ಲಿ ಗಾಯಗೊಂಡವರನ್ನು ಭೇಟಿಯಾಗಲು  ಪ್ರಿಯಾಂಕ ಗಾಂಧಿ  ವಾರಾಣಸಿಗೆ ತೆರಳಿ,. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಗಾಯಗೊಂಡವರ  ಭೇಟಿಯ ನಂತರ  ಸೋನಭದ್ರದತ್ತ ತೆರಳುತ್ತಿದ್ದಾಗ  ಪ್ರಿಯಾಂಕಾ  ವಾದ್ರಾ ಅವರ ಬೆಂಗಾವಲನ್ನು  ಪೊಲೀಸರು ತಡೆದರು.
ಸೋನಭದ್ರದಲ್ಲಿ  ಸೆಕ್ಷನ್ 144 ಜಾರಿಗೊಳಿಸಿರುವ ಕಾರಣ   ಅಲ್ಲಿಗೆ ತೆರಳಲು  ಭದ್ರತಾ ಪಡೆಗಳು ಅನುಮತಿ ನೀಡಲಿಲ್ಲ. ಆದರೆ,  ಪೊಲೀಸರ ಕ್ರಮವನ್ನು ವಿರೋಧಿಸಿದ ಪ್ರಿಯಾಂಕ ಗಾಂಧಿ  ಅಧಿಕಾರಿಗಳೊಂದಿಗೆ  ವಾಗ್ವಾದಕ್ಕಿಳಿದರು.   
ನಂತರ, ಅಧಿಕಾರಿಗಳ  ಕ್ರಮ ವಿರೋಧಿಸಿ  ಪ್ರಿಯಾಂಕ ಗಾಂಧಿ  ಸ್ಥಳದಲ್ಲೇ  ಧರಣಿ ನಡೆಸಲು ಮುಂದಾದರು,ಧರಣಿ ನಿಲ್ಲಿಸುವಂತೆ  ಪೊಲೀಸ್ ಅಧಿಕಾರಿಗಳು ಅವರಿಗೆ ಮನವಿ ಮಾಡಿಕೊಂಡರು ಎಂದು ವರದಿಯಾಗಿದೆ.
ಪೊಲೀಸರ  ಮನವಿಯಂತೆ ಧರಣಿ ನಿಲ್ಲಿಸಲು  ನಿರಾಕರಿಸಿದ ಪ್ರಿಯಾಂಕ ವಾದ್ರಾ . ಅವರೊಂದಿಗಿದ್ದ  ಕಾಂಗ್ರೆಸ್ ನಾಯಕ  ಅಜಯ್ ಕುಮಾರ್ ಲಲ್ಲು, ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.
ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಉಂಭಾ ಗ್ರಾಮದ ಘೋರವಾಲ್ ಪ್ರದೇಶದಲ್ಲಿ   ಭೂಮಿ ವಿವಾದ ಕುರಿತಂತೆ ನಡೆದ ಘರ್ಷಣೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ  10  ಮಂದಿ ಮೃತಪಟ್ಟಿದ್ದರು. ಈ ಸಂಬಂಧ  ಗ್ರಾಮ ಪಂಚಾಯ್ತಿಯ ಅಧ್ಯಕ್ಷ  ಸೇರಿದಂತೆ  27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯನ್ನು ಕಾಂಗ್ರೆಸ್, ಸಮಾಜವಾದಿ ಪಕ್ಷ,  ಬಹಜನ ಸಮಾಜ ಪಕ್ಷ ಹಾಗೂ ಆರ್ ಎಲ್ ಡಿ  ಪಕ್ಷಗಳು ಖಂಡಿಸಿದ್ದು, ರಾಜ್ಯದಲ್ಲಿ  ಕಾನೂನು  ಸುವ್ಯವಸ್ಥೆ  ಪರಿಸ್ಥಿತಿ  ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com