ಟ್ರಕ್ ಗೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ 9ಮಂದಿ ಕಾಲೇಜು ವಿದ್ಯಾರ್ಥಿಗಳ ದುರ್ಮರಣ

ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್​ ವಸ್ತಿ ಗ್ರಾಮದ ...

Published: 20th July 2019 12:00 PM  |   Last Updated: 20th July 2019 10:54 AM   |  A+A-


Car rams into truck on Pune-Solapur highway, 9 students killed

ಟ್ರಕ್ ಗೆ ಕಾರು ಡಿಕ್ಕಿ

Posted By : SD SD
Source : ANI
ಪುಣೆ: ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್​ ವಸ್ತಿ ಗ್ರಾಮದ ಬಳಿ ನಡೆದಿದೆ.

ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್​ ವಸ್ತಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಶುಕ್ರವಾರ ತಡರಾತ್ರಿ ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ. 

ಅಕ್ಷಯ್​ ಭರತ್​ ವೈಕರ್​, ವಿಶಾಲ್​ ಸುಭಾಷ್​ ಯಾದವ್​, ನಿಖಿಲ್​ ಚಂದ್ರಕಾಂತ್​, ನೂರ್​ ಮಹಮ್ಮದ್​ ಅಬ್ಬಾಸ್​ ದಯಾ, ಪರ್ವೇಜ್​ ಅತ್ತರ್​, ಶುಭಂ ರಾಮ್​ದಾಸ್​ ಭಿಸೆ, ಅಕ್ಷಯ್​ ಚಂದ್ರಕಾಂತ್​, ದತ್ತ ಗಣೇಶ್​ ಯಾದವ್​, ಜುಬೇರ್ ಅಜೀಜ್ ಮುಲಾನಿ ಮೃತರು. ಪುಣೆಯ ಯಾವತ್​ ಗ್ರಾಮದವರಾದ ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು.

ಇವರೆಲ್ಲ ರಾಯಗಢಕ್ಕೆ ಪ್ರವಾಸಕ್ಕೆ ತೆರಳಿ ಪುಣೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ಡಿವೈಡರ್​ ಬಳಿ ಜಂಪ್​ ಆಗಿದೆ. ಅದೇ ಸಮಯಕ್ಕೆ ಪುಣೆ ಕಡೆಯಿಂದ ಬರುತ್ತಿದ್ದ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪುಣೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
Stay up to date on all the latest ರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp