ಹರಿಯಾಣ: ನವಜಾತ ಹೆಣ್ಣುಮಗುವನ್ನು ಚರಂಡಿಗೆಸೆದ ಮಹಿಳೆ, ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಪೋಲೀಸರು

ಆಗ ತಾನೆ ಹುಟ್ಟಿದ್ದ ಹೆಣ್ಣುಮಗುವೊಂಡನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಚರಡಿಗೆ ಎಸೆದಿರುವ ಘಟನೆ ಹರಿಯಾಣದ ಕೈತಾಲ್ ಪಟ್ಟಣದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಂಡೀಘರ್: ಆಗ ತಾನೆ ಹುಟ್ಟಿದ್ದ ಹೆಣ್ಣುಮಗುವೊಂಡನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಚರಡಿಗೆ ಎಸೆದಿರುವ ಘಟನೆ ಹರಿಯಾಣದ ಕೈತಾಲ್ ಪಟ್ಟಣದಲ್ಲಿ ನಡೆದಿದೆ. ಆದರೆ ಚೀಲದಲ್ಲಿ ಸುತ್ತಿ ಎಸೆದಿದ್ದ ಕಾರಣ ಮಗುವು ಬೀದಿ ನಾಯಿಗಳಿಂದ ಘಾಸಿಗೊಳ್ಳುವ ಮುನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.ಆದರೆ ಈ ಘಟನೆ ಮತ್ತೊಮ್ಮೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ " ‘ಬೇಟಿ ಬಚಾವೊ-ಬೇಟಿ ಪದಾವೊ" ಗೆ ಕಪ್ಪು ಚುಕ್ಕಿಯಾಗಿ ಪರಿಣಮಿಸಿದೆ.
ವಿಶೇಷವೆಂದರೆ ಚೀಲದಲ್ಲಿ ಸುತ್ತಿ ಚರಂಡಿಗೆಸೆದಿದ್ದ ಮಗುವನ್ನು ಬೀದಿನಾಯಿಗಳು ಎಳೆದು ತಂದು ರಸ್ತೆ ಮಧ್ಯೆ ಎಸೆದಿವೆ, ಆ ಬಳಿಕ ಸುತ್ತಲೂ ನಿಂತು ಬೊಗಳಲು ಪ್ರಾರಂಭಿಸಿವೆ. ಆಗ ಅದನ್ನು ಗಮನಿಸಿದ ನಾಗರಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಮಗುವನ್ನು ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ  ಮಹಿಳೆ ಮಗುವನ್ನು ಎಸೆಯುತ್ತಿರುವುದು ಕಾಣಬಹುದಾಗಿದೆ. ಅಲ್ಲದೆ ನಾಯಿಗಳು ಮಗುವನ್ನು ಚರಂಡಿಯಿಂದ ಹೊರಗೆಳೆದದ್ದು ಸಹ ದಾಖಲಾಗಿದೆ.ಕೈತಾಲ್‌ನ ಡೋಗ್ರಾ ಗೇಟ್‌ನಲ್ಲಿ ಗುರುವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
"ಮಗು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com