ಉತ್ತರ ಪ್ರದೇಶ: ವಿದ್ಯಾರ್ಥಿಗಳನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಾಯಿಸಿದ ಶಾಸಕ- ವಿಡಿಯೋ ವೈರಲ್

ಉತ್ತರ ಪ್ರದೇಶದ ಶಾಸಕರೊಬ್ಬರು ತಾವೇ ಸ್ವತ: ಶಾಲಾ ಮಕ್ಕಳಲ್ಲಿ ಕೇಸರಿ ಸಿದ್ದಾಂತ ತುಂಬುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.ಸೈದರಾಜ ಕ್ಷೇತ್ರದ ಶಾಸಕ ಸುಶೀಲ್ ಸಿಂಗ್ ಜುಲೈ 17 ರಂದು ನ್ಯಾಷನಲ್ ಇಂಟರ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೂ ಬಿಜೆಪಿ ಸದಸ್ಯತ್ವವನ್ನು ವಿಸ್ತರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ಉತ್ತರ ಪ್ರದೇಶದ ಶಾಸಕರೊಬ್ಬರು ತಾವೇ ಸ್ವತ:  ಶಾಲಾ ಮಕ್ಕಳಲ್ಲಿ ಕೇಸರಿ ಸಿದ್ದಾಂತ ತುಂಬುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.ಸೈದರಾಜ ಕ್ಷೇತ್ರದ ಶಾಸಕ ಸುಶೀಲ್ ಸಿಂಗ್ ಜುಲೈ 17 ರಂದು ನ್ಯಾಷನಲ್ ಇಂಟರ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೂ ಬಿಜೆಪಿ ಸದಸ್ಯತ್ವವನ್ನು ವಿಸ್ತರಿಸಿದ್ದಾರೆ.
ರಾಜ್ಯಶಾಸ್ತ್ರದ ಬಗ್ಗೆ ಒಂದು ಗಂಟೆ ತರಗತಿ ತೆಗೆದುಕೊಂಡಿದ್ದ ಈ ಶಾಸಕ ಕೇಸರಿ ಸಿದ್ದಾಂತದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರವಚನ ಮಾಡಿದ್ದಾರೆ.ಬಿಜೆಪಿ ಸ್ಕಾರ್ಪ್ ಗಳನ್ನು ಕೂಡಾ ವಿದ್ಯಾರ್ಥಿಗಳಿಗೆ ಈ ಶಾಸಕ ವಿತರಿಸಿದ್ದಾನೆ.ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಈ ಶಾಸಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಶಾಲಾ ಅವಧಿಯಲ್ಲಿ ಬಿಜೆಪಿ ಸದಸ್ಯತ್ವ ನೋಂದವಣಿ ಮಾಡಲಾಗಿದೆ. ಇದಕ್ಕಾಗಿ ತರಗತಿಯನ್ನು ರದ್ದುಗೊಳಿಸಲಾಗಿದೆ. ಶಾಸಕ ಸುಶೀಲ್ ಸಿಂಗ್  ಬಲಿಷ್ಠ ವ್ಯಕ್ತಿಯಾಗಿದ್ದು, ಯಾರೂ ಕೂಡಾ ಆತನ ಎದುರು ಮಾತನಾಡಲ್ಲ, ಅನೇಕ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎಂದು ಶಾಲೆಯ ಶಿಕ್ಷರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದಾಗ್ಯೂ, ತಮ್ಮ ಮೇಲಿನ ಆರೋಪ ನಿರಾಕರಿಸಿರುವ ಶಾಸಕ ಸುಶೀಲ್ ಸಿಂಗ್, ಇದು ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಅಲ್ಲ, ಶಾಲೆಯಲ್ಲಿ ಗ್ರಂಥಾಲಯ ಇಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದರಿಂದ ಶಾಲೆಗೆ ಭೇಟಿ ನೀಡಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. 
ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿರುವ ಜಿಲ್ಲಾಧಿಕಾರಿ ನವನೀತ್ ಸಿಂಗ್ ಚಾಹಲ್, ವರದಿ ಸಲ್ಲಿಸುವಂತೆ ಶಾಲೆಗಳ ಜಿಲ್ಲಾ ಇನ್ಸ್ ಪೆಕ್ಟರ್  -ಡಿಐಒಎಸ್  ವಿನೋದ್ ಕುಮಾರ್ ರೈ ಅವರಿಗೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com