ಕೇಂದ್ರ ಸಚಿವ ಬಲಿಯಾನ್ ಗೆ ಎಚ್ಚರಿಕೆ ಕೊಟ್ಟ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್...

Published: 20th July 2019 12:00 PM  |   Last Updated: 20th July 2019 12:23 PM   |  A+A-


Venkaiah Naidu

ವೆಂಕಯ್ಯ ನಾಯ್ಡು

Posted By : VS VS
Source : UNI
ನವದೆಹಲಿ: ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್  ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಶುಕ್ರವಾರ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಮತ್ತೊಮ್ಮೆ, ಇಂತಹ ತಪ್ಪು ಆಗಬಾರದು ಎಂದು ಎಚ್ಚರಿಕೆ ನೀಡಿದರು. ಬುಧವಾರ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಸಚಿವ ಬಲಿಯಾನ್ ಅವರ ಹೆಸರಿದ್ದರೂ ಅಂದು ಅವರು ಸದನಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಭಾಪತಿ ವೆಂಕಯ್ಯ ನಾಯ್ಡು ಅವರು ಸಚಿವರನ್ನು ಉದ್ದೇಶಿಸಿ, ಸಚಿವರೇ ಬುಧವಾರದ ಕಾರ್ಯಸೂಚಿಯಲ್ಲಿ ನಿಮ್ಮ ಹೆಸರಿತ್ತು, ಆದರೆ  ನೀವು ಹಾಜರಿರಲಿಲ್ಲ, ಇನ್ನೂ ಮುಂದೆ ಈ ರೀತಿ ಆಗದಂತೆ  ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಸಚಿವ ಬಲಿಯಾನ್ ತಮ್ಮ ಗೈರುಹಾಜರಿಗೆ ವಿಷಾದ ವ್ಯಕ್ತಪಡಿಸಿ, ಇನ್ನೂಮುಂದೆ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಸಂಸತ್ ಅಧಿವೇಶನಗಳಿಗೆ ಗೈರಾಗುವ ಸಚಿವರು, ಸಂಸದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp