ಸಂಸ್ಕೃತ ಕಲಿತಿಲ್ಲದ ಬಗ್ಗೆ ಅಂಬೇಡ್ಕರ್ ಗೂ ವಿಷಾಧವಿತ್ತು- ಆರ್ ಎಸ್ ಎಸ್ ಮುಖ್ಯಸ್ಥ
ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
Published: 21st July 2019 12:00 PM | Last Updated: 21st July 2019 11:19 AM | A+A A-

ಮೋಹನ್ ಭಾಗವತ್
Source : PTI
ನಾಗಪುರ: ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುಡುಕಟ್ಟು ಸಮುದಾಯದ ಭಾಷೆ ಸೇರಿದಂತೆ ದೇಶದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಕನಿಷ್ಠ ಅಂದರೂ ಶೇಕಡಾ 30 ರಷ್ಟು ಸಂಸ್ಕೃತ ಪದಗಳಿರುತ್ತವೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂಸ್ಕೃತವನ್ನು ಕಲಿಯುವ ಅವಕಾಶ ಸಿಗಲಿಲ್ಲ ಎಂದು ವಿಷಾದಿಸಿದ ಅವರು, ದೇದ ಸಂಪ್ರದಾಯಗಳ ಬಗ್ಗೆ ಕಲಿಯಬೇಕಾಗುತ್ತದೆ ಎಂದರು.
ದೇಶದಲ್ಲಿನ ಯಾವುದೇ ಭಾಷೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಕಲಿಯಲು ಸಾಧ್ಯವಿಲ್ಲ. ಯಾವುದೇ ಭಾಷೆಗಳನ್ನು ಕಲಿಯಬೇಕಾದರೆ ಬೇರೆಯವರು ಮಾತನಾಡುವಾಗ ಸ್ವಲ್ವವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಂತರ ಅರ್ಥ ಮಾಡಿಕೊಳ್ಳಲಾಗುತ್ತದೆ. ಸಂಸ್ಕೃತ ಸಂಪರ್ಕ ಭಾಷೆ ಎಂದು ಹೇಳಿದರು.
ಪ್ರಾಚೀನ ಕಾಲದ ಆಯುರ್ವೇದ, ಕೃಷಿ ಪದ್ಧತಿ ಎಲ್ಲವೂ ಸಂಸ್ಕೃತದಲ್ಲಿದ್ದು, ಆಧುನಿಕ ಪೂರ್ವ ಭಾರತದ ಇತಿಹಾಸವೆಲ್ಲವೂ ಸಂಸ್ಕೃತದಲ್ಲಿಯೇ ಇದೆ. ಆದ್ದರಿಂದ ಸಂಸ್ಕೃತ ಗೊತ್ತಿಲ್ಲದೆ ದೇಶವನ್ನು ಅರ್ಥಮಾಡಿಕೊಳ್ಳುವುದು ಕಷ್ಟು ಅಂಬೇಡ್ಕರ್ ಇದನ್ನು ಹೇಳಿದ್ದರು ಎಂದರು.
ಸಂಸ್ಕೃತ ಕಲಿತಿಲ್ಲದ ಬಗ್ಗೆ ಅಂಬೇಡ್ಕರ್ ಕೂಡಾ ವಿಷಾಧವಿದೆ ಎಂದು ಅಂಬೇಡ್ಕರ್ ಹೇಳಿದ್ದರು. ನಮ್ಮ ದೇಶ, ಜನರು ಹಾಗೂ ಸಂಸ್ಕೃತಿಯನ್ನು ತಿಳಿಯಬೇಕಾದರೆ ಪ್ರತಿಯೊಬ್ಬರು ಸಂಸ್ಕೃತ ಕಲಿಯಬೇಕಾಗುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now