ಪಂಡಿತ್ ನೆಹರು ನೇಯ್ದ ಸೀರೆ ಫೋಟೋ ಪೋಸ್ಟ್ ಮಾಡಿದ ಬಿಜೆಪಿ ಸಂಸದೆ!

ಸ್ವಾತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರೂ ಜೈಲಿನಲ್ಲಿದ್ದ ಸಂದರ್ಭದಲ್ಲಿ ನೇಯ್ದ ಸೀರೆಯನ್ನು ಬಿಜೆಪಿ ಸಂಸದೆಯೊಬ್ಬರು ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮನೇಕಾ ಗಾಂಧಿ
ಮನೇಕಾ ಗಾಂಧಿ
ನವದೆಹಲಿ: ಸ್ವಾತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರೂ ಜೈಲಿನಲ್ಲಿದ್ದ ಸಂದರ್ಭದಲ್ಲಿ ನೇಯ್ದ ಸೀರೆಯನ್ನು ಬಿಜೆಪಿ ಸಂಸದೆ ಮನೇಕಾ ಗಾಂಧಿ ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬನಾರಸ್ ನಲ್ಲಿ 2011ರಲ್ಲಿ ನಡೆದ ವರುಣ್ ಗಾಂಧಿ ಅವರ ವಿವಾಹ ಮಹೋತ್ಸವದ ಪೋಟೋವೊಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ಮನೇಕಾ ಗಾಂಧಿ, 'ನಾನು ಧರಿಸಿರುವ ಹತ್ತಿ ಸೀರೆ ಪಂಡಿತ್ ಜವಹರ್ ಲಾಲ್ ನೆಹರೂ ನೇಯ್ದಿರುವ ಸೀರೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಜೈಲಿನಲ್ಲಿದ್ದಾಗ ನೇಯ್ದು ಸೀರೆ ಇದಾಗಿದೆ. ಇದು 70 ವರ್ಷಕ್ಕೂ ಹಳೆಯದಾದ ಸೀರೆ ಎಂದು ಬರೆದುಕೊಂಡಿದ್ದಾರೆ.
 ಸೊಸೆ ಯಾಮಿನಿ ಧರಿಸಿರುವ ಪುರಾತನ ಕಾಲದ ಸೀರೆ ನನ್ನ ಮದುವೆ ಸಮಾರಂಭದಲ್ಲಿ ನಮ್ಮ ಅತ್ತೆ ನೀಡಿದ ಸೀರೆಯಾಗಿದೆ ಎಂದು ಮನೇಕಾ ಗಾಂಧಿ ಹೇಳಿಕೊಂಡಿದ್ದಾರೆ.
ಕಳೆದ ವಾರ ಟ್ರೆಂಡ್ ಸೃಷ್ಟಿಸಿದ  ಸ್ಯಾರಿ ಟ್ವೀಟರ್  ಹ್ಯಾಷ್ ಟ್ಯಾಗ್ ಭಾಗವಾಗಿ ಮನೇಕಾ ಗಾಂಧಿ  ಈ ಟ್ವೀಟ್  ಮಾಡಿರಬಹುದು. ಸ್ಯಾರಿ ಟ್ಲೀಟರ್ ಅಭಿಯಾನದಲ್ಲಿ ರಾಜಕಾರಣಿಗಳಿಂದ ಹಿಡಿದು ಸೆಲೆಬ್ರಿಟಿಯವರೆಗೂ ಪ್ರತಿಯೊಬ್ಬರು ಸೀರೆಯನ್ನು ಟ್ವೀಟ್ ಮಾಡಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಮದುವೆ ಸಂದರ್ಭದಲ್ಲಿ ಧರಿಸಿದ ಸೀರೆಯನ್ನು ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com