ಒಮರ್ ಅಬ್ದುಲ್ಲಾ ಒಬ್ಬ 'ರಾಜಕೀಯ ಬಾಲಪರಾಧಿ': ಕಾಶ್ಮೀರ ರಾಜ್ಯಪಾಲ ಮಲಿಕ್ ಟೀಕೆ

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ರಾಜ್ಯದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು "ರಾಜಕೀಯ ಬಾಲಾಪರಾಧಿ" ಎಂದು ಕರೆವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಸತ್ಯ ಪಾಲ್ ಮಲಿಕ್
ಸತ್ಯ ಪಾಲ್ ಮಲಿಕ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ರಾಜ್ಯದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು "ರಾಜಕೀಯ ಬಾಲಾಪರಾಧಿ"  ಎಂದು ಕರೆವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಜುಲೈ 22ರಂದು ಮಲಿಕ್ "ಒಮರ್ ಒಬ್ಬ ರಾಜಕೀಯ ಬಾಲಾಪರಾಧಿ, ಅವರು ಎಲ್ಲದರ ಬಗೆಗೆ ಟ್ವೀಟ್ ಮಾಡುತಾರೆ. ಅವರ ಟ್ವೀಟ್ ಗಳಿಗೆ ಬಂದ ಪ್ರತಿಕ್ರಿಯೆಗಳನ್ನೊಮ್ಮೆ ನೋಡಿ, ಅಲ್ಲಿ ನಿಮಗೆಲ್ಲವೂ ತಿಳಿಯಲಿದೆ. ಬೀದಿಯಲ್ಲಿ ಹೋಗುವ ಜನರನ್ನೊಮ್ಮೆ ಅವರ ಬಗೆಗೆ ವಿಚಾರಿಸಿದರೆ ಇನ್ನೂ ಸ್ಪಷ್ಟವಾಗಿರಲಿದೆ" ಮಲಿಕ್ ಹೇಳಿದರು.
ಉಗ್ರರು ಸೇನಾಪಡೆಯ ಯೋಧರನ್ನು ಗುರಿಯಾಗಿಟ್ಟು ದಾಳಿ ನಡೆಸುವ ಬದಲು ಭ್ರಷ್ಟಾಚಾರಿ ನಾಯಕರ ಮೇಲೆ ದಾಳಿ ಮಾಡಲಿ ಎಂಬ ತಮ್ಮ ಹೇಳಿಕೆ ಕುರಿತು ಒಮರ್ ಅಬ್ದುಲ್ಲಾ ಟ್ವೀಟ್ ಪ್ರತಿಕ್ರಿಯೆ ನೀಡಿದ ದಿನದ ತರುವಾಯ ಜಮ್ಮು ಕಾಶ್ಮೀರ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ.
ಜುಲೈ 21 ರಂದು ಮಲಿಕ್ ಭಾಷಣವೊಂದರಲ್ಲಿ, ಭದ್ರತಾ ಪಡೆಗಳ ಮೇಲೆ ಆಕ್ರಮಣ ಮಾಡುವ ಬದಲು ದೇಶ ಮತ್ತು ಅವರ ರಾಜ್ಯವನ್ನು ಲೂಟಿ ಮಾಡಿದವರನ್ನು ಉಗ್ರರು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು."ಕಾಶ್ಮೀರದ ಅತಿದೊಡ್ಡ ಕಾಯಿಲೆ ಭ್ರಷ್ಟಾಚಾರ ... ಈ ಯುವಕರು ಬಂದೂಕುಗಳಿಂದ,ಪಿಎಸ್ಒ ಮತ್ತು ಎಸ್ಪಿಒಗಳನ್ನು ಕೊಲ್ಲುತ್ತಿದ್ದಾರೆ, ನೀವು ಅವರನ್ನು ಏಕೆ ಕೊಲ್ಲುತ್ತಿದ್ದೀರಿ? ನಿಮ್ಮ ದೇಶವನ್ನು ಮತ್ತು ಎಲ್ಲಾ ಸಂಪತ್ತನ್ನು ಕಾಶ್ಮೀರದಿಂದ ಲೂಟಿ ಮಾಡಿದವರನ್ನು ಕೊಲ್ಲಲು ನೀವೇಕೆ ಮುಂದಾಗಿಲ್ಲ ಸೇನಾಪಡೆಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವುದರಿಂಡ ಏನನ್ನೂ ಸಾಧಿಸಲಾಗುವುದಿಲ್ಲ" ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಜ್ಯದಲ್ಲಿ ಯಾವುದೇ ರಾಜಕಾರಣಿ ಅಥವಾ ಅಧಿಕಾರಿ ಕೊಲ್ಲಲ್ಪಟ್ಟರೆ ಅದನ್ನು ರಾಜ್ಯಪಾಲರ ಆದೇಶದ ಫಲಶ್ರುತಿ ಎಂದು ಪರಿಗಣಿಸಿ ಎಂದು ಹೇಳಿದ್ದರು. "ಈ ಟ್ವೀಟ್ ಅನ್ನು ಹಾಗೆಯೇ ಉಳಿಸಿಕೊಳ್ಳಿರಿ! ಇಂದಿನಿಂದ  ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಮುಖ್ಯ ರಾಜಕಾರಣಿ ಅಥವಾ ಸೇವೆ ಸಲ್ಲಿಸುತ್ತಿರುವ / ನಿವೃತ್ತ ಅಧಿಕಾರಿ ಹತ್ಯೆಯಾದರೆ ಅದು ಜಮ್ಮು ಕಾಶ್ಮೀರದ ರಾಜ್ಯಪಾಲರ ಆದೇಶದ ಮೇರೆಗೆ ನಡೆದಿದೆ ಎಂದು ಭಾವಿಸಬೇಕಿದೆ" ಅಬ್ದುಲ್ಲಾ ಟ್ವೀಟ್ ಮಾಡಿದ್ದರು.
ಮತ್ತೊಂದು ಟ್ವೀಟ್‌ನಲ್ಲಿ, ಅಬ್ದುಲ್ಲಾ ಮಲಿಕ್‌ನನ್ನು ಗುರಿಯಾಗಿಸಿ "ತಾವು  ಇತರ ರಾಜಕಾರಣಿಗಳತ್ತ ಬೆರಳು ತೋರಿಸುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ
ಇದೇ ವೇಳೆ ಸೋಮವಾರ ತಮ್ಮ ಈ ಮುಂಚಿನ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟ ರಾಜ್ಯಪಾಲರು "ನಾನು ಹೇಳಿದ್ದೇನಾದರೂ ಅತಿರೇಕವೆನಿಸಿದರೆ ಕ್ಷಮಿಸಿ, ಅತಿಯಾದ ಭ್ರಷ್ಟಾಚಾರದಿಂದಾಗಿ ಕೋಪ ಮತ್ತು ಹತಾಶೆಯ ಸ್ಥಿತಿ ನನಗಾಗಿದೆ. ಹಾಗಾಗಿ ಆ ಹೇಳಿಕೆ ನಿಡಿದ್ದೆ.  ರಾಜ್ಯಪಾಲನಾಗಿ ನಾನು ಇದನ್ನು ಹೇಳಬಾರದಿತ್ತು. ಆದರೆ ನಾನು ಈ ಹುದ್ದೆಯನ್ನು ಅಲಂಕರಿಸದಿದ್ದರೆ, ಆಗ ಇದೇ ಹೇಳಿಕೆ ನೀಡುತ್ತಿದ್ದೆ ಹಾಗೂ ಪರಿಣಾಮಗಳನ್ನು ಎದುರಿಸಲು ಸಿದ್ದವಾಗುತ್ತಿದ್ದೆ " ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com