ದೆಹಲಿ: ತಾಜ್ ಪ್ಯಾಲೇಜ್ ಹೋಟೆಲ್ ನಲ್ಲಿ ಎನ್ಆರ್ ಐ ಉದ್ಯಮಿ ನಿಗೂಢ ಸಾವು

35 ವರ್ಷದ ಎನ್ಆರ್ ಐ ಉದ್ಯಮಿಯೊಬ್ಬರು ಚಾಣುಕ್ಯಪುರಿಯಲ್ಲಿರುವ ಫೈವ್ ಸ್ಟಾರ್ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ...

Published: 22nd July 2019 12:00 PM  |   Last Updated: 22nd July 2019 03:23 AM   |  A+A-


NRI businessman found dead in Delhi's Taj Palace hotel

ಸಾಂದರ್ಭಿಕ ಚಿತ್ರ

Posted By : LSB LSB
Source : IANS
ನವದೆಹಲಿ: 35 ವರ್ಷದ ಎನ್ಆರ್ ಐ ಉದ್ಯಮಿಯೊಬ್ಬರು ಚಾಣುಕ್ಯಪುರಿಯಲ್ಲಿರುವ ಫೈವ್ ಸ್ಟಾರ್ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಉದ್ಯಮಿಯನ್ನು ಭಾರತೀಯ ಮೂಲದ ಅಮೆರಿಕ ಪ್ರಜೆ ಮುನ್ನಿ ಜೈಟ್ಲಿ ಎಂದು ಗುರುತಿಸಲಾಗಿದ್ದು, ಶನಿವಾರು ಅವರ ತಂದೆಯ ಫೋನ್ ಕಾಲ್ ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಅವರು ಹೋಟೆಲ್ ಸಿಬ್ಬಂದಿಗೆ ಫೋನ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಹೋಟೆಲ್ ಸಿಬ್ಬಂದಿ ಲ್ಯಾಂಡ್ ಲೈನ್ ಫೋನ್ ಗೆ ಕರೆಗೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ 6 ಮಹಡಿಯಲ್ಲಿರುವ ರೋಮ್ ಗೆ ತೆರಳಿ ಬಾಗಿಲು ಬಾರಿಸಿದ್ದಾರೆ. ಆಗಲೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ನಕಲಿ ಕೀ ಮೂಲಕ ಬಾಗಿಲು ತೆರೆಯಲಾಗಿದೆ. ಈ ವೇಳೆ ಜೈಟ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ ಈಶ್ ಸಿಂಘಾಲ್ ಅವರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಪಿ ಹೇಳಿದ್ದಾರೆ.

ಮೃತ ಜೈಟ್ಲಿ ಅವಿವಾಹಿತರಾಗಿದ್ದು, ತಂದೆ, ತಾಯಿಯೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರು. ವ್ಯವಹಾರಕ್ಕಾಗಿ ಕಳೆದ ಗುರುವಾರ ದೆಹಲಿಗೆ ಆಗಮಿಸಿ, ಹೋಟೆಲ್ ನಲ್ಲಿ ತಂಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp