ಸಂಸತ್ತಿನಲ್ಲಿ ಪ್ರಧಾನಿ ಭೇಟಿಯಾದ 'ವಿಶೇಷ ಅತಿಥಿ': ಮಗುವಿನಂತೆ ಆನಂದಿಸಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ವಿಶೇಷ ಅತಿಥಿಯೊಬ್ಬರನ್ನು ಭೇಟಿಯಾಗಿದ್ದಾರೆ. ಆ ಅತಿಥಿಯೊಂದಿಗೆ ಆನಂದದ ಕ್ಷಣಗಳನ್ನು ಕಳೆದಿದ್ದಾರೆ. ತಾವು ಸಂತಸಪಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

Published: 23rd July 2019 12:00 PM  |   Last Updated: 23rd July 2019 06:26 AM   |  A+A-


PM Modi With Child

ಮಗುವಿನೊಂದಿಗೆ ಪ್ರಧಾನಿ ಮೋದಿ

Posted By : ABN ABN
Source : Online Desk
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ವಿಶೇಷ ಅತಿಥಿಯೊಬ್ಬರನ್ನು ಭೇಟಿಯಾಗಿದ್ದಾರೆ. ಆ ಅತಿಥಿಯೊಂದಿಗೆ ಆನಂದದ ಕ್ಷಣಗಳನ್ನು ಕಳೆದಿದ್ದಾರೆ. ತಾವು ಸಂತಸಪಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್  ವೈರಲ್ ಆಗಿದೆ.

'ಸಂಸತ್ತಿನಲ್ಲಿ ಅತ್ಯಂತ ವಿಶೇಷ ಅತಿಥಿಯನ್ನು ಭೇಟಿ ಮಾಡಿದೆ 'ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮುದ್ದಾದ ಮಗುವೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಸದ್ಯ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗಿದ್ದು, ಕುತೂಹಲವನ್ನು ಮೂಡಿಸಿದೆ.

ಈ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್, ಕಾಮೆಂಟ್ ಗಳು ಬಂದಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಈ ಮಧ್ಯೆ ಪ್ರಧಾನಿ ಪೋಸ್ಟ್ ಮಾಡಿರುವ ಪೋಟೋ ಬಿಜೆಪಿಯ ಸಂಸದ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗ ಎಂದು ಮೂಲಗಳನ್ನು ಉಲ್ಲೇಖಿಸಿ ಯುಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp