ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ!

ಈ ಅಂಗನವಾಡಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡಿಗೆಯನ್ನು ಶೌಚಾಲಯ ಕೋಣೆಯಲ್ಲಿ ತಯಾರಾಗುತ್ತದೆ!
ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ!
ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ!
ಭೋಪಾಲ್: ಈ ಅಂಗನವಾಡಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡಿಗೆಯನ್ನು ಶೌಚಾಲಯ ಕೋಣೆಯಲ್ಲಿ ತಯಾರಾಗುತ್ತದೆ! ಹೌದು ಮಧ್ಯಪ್ರದೇಶದ  ಶಿವಪುರಿ ಜಿಲ್ಲೆಯ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರದಲ್ಲಿನ ದುಸ್ಥಿತಿಯ ಕಥೆ ಇದು. ಆರೋಗ್ಯದ ಮಾನದಂಡ ಗಳನ್ನು ಸಂಪೂರ್ಣವಾಗಿ ಗಾಳಿ ತೂರಿರುವ ಅಧಿಕಾರಿಗಳು ಸ್ಥಳದ ಕೊರತೆ ನೆಪ ಹೇಳಿ ಶೌಚಾಲಯದ ಆವರಣದಲ್ಲೇ ಮಕ್ಕಳ ಬಿಸಿಯೂಟ ಅಡಿಗೆ ತಯಾರಿಸುತ್ತಿದ್ದಾರೆ.
ಕರೇರಾ ಎಂಬಲ್ಲಿನ ಅಂಗನವಾಡಿ ಮಕ್ಕಳಿಗೆ ಬಿಸಿಯೂಟಕ್ಕಾಗಿ ಆಹಾರ ತಯಾರಿಸಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದಾಗಿ ಅಲ್ಲಿನ ಶೌಚಾಲಯವನ್ನೇ ತಾತ್ಕಾಲಿಕ ಅಡಿಗೆಮನೆಯಾಗಿ ಬದಲಿಸಿಕೊಳ್ಲಲಾಗಿದೆ.ಇನ್ನೂ ಆಘಾತಕಾರಿ ಅಂಶವೆಂದರೆ ಶೌಚಾಲಯದಲ್ಲೇ ನೀರು ಬಳಸಿ ಆಹಾರ ಬೇಯಿಸಲಾಗುತ್ತಿದ್ದು ಇದೇ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.
"ನಮಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶೌಚಾಲಯದ ಹೊರತು ಬೇರಾವ ಸ್ಥಳವಿಲ್ಲ" ಎಂದು ಅಂಗನವಾಡಿ  ಕೇಂದ್ರದ ಸಿಬ್ಬಂದಿ ರಾಜ್‌ಕುಮಾರಿ ಯೋಗಿ ಹೇಳುತ್ತಾರೆ.
ಅಡಿಗೆ ತಯಾರಿಗಾಗಿ ಸ್ಥಳಾವಖಾಶದ ಕೊರತೆ ಸಮಸ್ಯೆ ಇದೆ. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.ಹಾಗಾಗಿ ನಾವು ಶೌಚಾಲಯದ ಒಂದು ಬಾಗವನ್ನೇ ಅಡಿಗೆ ಕೋಣೆಯಾಗಿ ಪರಿವರ್ತಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಪ್ರಿಯಾಂಕಾ ಅವರಿಗೆ ನೈರ್ಮಲ್ಯದ ಕುರಿತಂತೆ ಪ್ರಶ್ನೆ ಕೇಳಿದರೆ ಅಂತಹಾ ಯಾವ ಸಮಸ್ಯೆ ಇಲ್ಲ ಎಂದು ಉತ್ತರಿಸಿದ್ದಾರೆ. ಶೌಚಾಲಯ ನಿರ್ಮಾಣ ಪೂರ್ಣವಾಗಿಲ್ಲ, ಬೇರೆಡೆ ನೀರು ಸರಬರಾಜು ವ್ಯವಸ್ಥೆ ಸರಿಯಿಲ್ಲದ ಕಾರಣ ಅಲ್ಲಿಯೇ ಅಡಿಗೆ ತಯಾರಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಶಿವಪುರಿಯಲ್ಲಿ ಇಂತಹಾ ಪ್ರಸಂಗ ಇದೇ ಮೊದಲಲ್ಲ, ಇದಕ್ಕೆ ಹಿಂದೆ ಎರಡು ಬಾರಿ ಇಂತಹಾ ದೂರುಗಳು ಬಂದಿದ್ದವು,ಈ ಹಿಂದೆ, ಶೌಚಾಲಯಗಳನ್ನು ಕಿರಾಣಿ ಅಂಗಡಿ ಮತ್ತು ಅಡುಗೆಮನೆಯಾಗಿ ಬಳಸಿದ ಉದಾಹರಣೆಗಳೂ ಇಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com