ಭಯೋತ್ಪಾದನಾ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ: ತಿದ್ದುಪಡಿ ಸಮರ್ಥಿಸಿಕೊಂಡ ಅಮಿತ್ ಶಾ

ಉಗ್ರರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ) ಅನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.
ಅಮಿತ್ ಶಾ
ಅಮಿತ್ ಶಾ
ನವದೆಹಲಿ: ಉಗ್ರರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ) ಅನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗಳನ್ನು ಗೃಹಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ., ಕಾನೂನು ಜಾರಿ ಸಂಸ್ಥೆಗಳನ್ನು ಭಯೋತ್ಪಾದಕರಿಗಿಂತ ಒಂದು ಹೆಜ್ಜೆ ಮುಂದಿಡಲು ಅವು ಅತ್ಯಗತ್ಯ ಎಂದು ಅವರು ಹೇಳೀದ್ದಾರೆ.
ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಗೆ ತಿದ್ದುಪಡಿ ತರಲು ಕೋರಿ ಮಸೂದೆಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಮತ್ತು ಭಯೋತ್ಪಾದನೆಯನ್ನು ಬೇರುಬಿಡಲು ಮಾತ್ರ ನಾವೆಂದಿಗೂ ಬಿಡುವುದಿಲ್ಲ ಎಂದು ಪ್ರತಿಪಾದಿಸಿದರು ಭಯೋತ್ಪಾದನೆ ಹುಟ್ಟಲು ಭಯೋತ್ಪಾದಕ ಅಗತ್ಯ, ಹಾಗಾಗಿ ಭಯೋತ್ಪಾದಕರೊಡನೆ ಸಂಪರ್ಕ ಹೊಂದಿದೆವರೆಂದು  ಶಂಕಿಸಲಾಗಿರುವ ವ್ಯಕ್ತಿಯನ್ನು "ಉಗ್ರವಾದಿ" ಎಂದು ಘೋಷಿಸುವ ಅಧಿಕಾರ ಈ ಮಸೂದೆಯಿಂದಾಗಿ ಸರ್ಕಾರಕ್ಕೆ ಲಭಿಸಲಿದೆ.
ಯುಎಪಿಎ (ತಿದ್ದುಪಡಿ) ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು ತಿದ್ದುಪಡಿಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್‌ ಗೆ ಕುಟುಕಿದ ಶಾ  ತಮ್ಮ ಅಧಿಕಾರಾವಧಿಯಲ್ಲಿ ಭಯೋತ್ಪಾದನಾ-ವಿರೋಧಿ ಕಾನೂನುಗಳನ್ನು ತಿದ್ದುಪಡಿ ಮಾಡುವಲ್ಲಿ ಯುಪಿಎ ಸರಿಯಾಗಿದ್ದದ್ದೇ ಆದರೆ ಎನ್‌ಡಿಎ  ಕೂಡ ಅದೇ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.
ಸಿದ್ಧಾಂತದ ಹೆಸರಿನಲ್ಲಿ, ಕೆಲವರು ನಗರ ನಕ್ಸಲಿಸಂ ಅನ್ನು ಉತ್ತೇಜಿಸುತ್ತಿದ್ದಾರೆಮತ್ತು ಸರ್ಕಾರಕ್ಕೆ ಅವರ ಬಗ್ಗೆ ಸಹಾನುಭೂತಿ ಇಲ್ಲ. ಎಂದು ಶಾ ಹೇಳಿದ್ದಾರೆ.ಸರ್ಕಾರ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಮತ್ತು ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ, ಭಯೋತ್ಪಾದನಾ ವಿರೋಧಿ ಕಾನೂನುಗಳಲ್ಲಿ ಮಾಡಿದ ತಿದ್ದುಪಡಿಗಳ ಮೂಲಕ ಉಗ್ರವಾದವನ್ನು ದಮನ ಮಾಡುವುದು ಅಗತ್ಯ, ಹಿಂದಿನ ಸರ್ಕಾರಗಳು ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಉಲ್ಲೇಖಿಸಿ ಶಾ ಹೇಳಿದ್ದಾರೆ.
ಮಸೂದೆ ಮಂಡನೆ ಕುರಿತು ಮತದಾನದ ವೇಳೆ 287 ಸಂಸದರು ಇದನ್ನು ಬೆಂಬಲಿಸಿದರೆ ಕೇವಲ ಎಂಟು ಮಂದಿ ಮಾತ್ರ ವಿರೋಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com