ಚಂದ್ರಯಾನ-2 ಆಗಸ್ಟ್ 20ರ ವೇಳೆಗೆ ಚಂದ್ರನ ತಲುಪಲಿದೆ: ಇಸ್ರೋ

ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಆಗಸ್ಟ್ 20ರ ವೇಳೆಗೆ...
ಚಂದ್ರಯಾನ-2 ಉಡಾವಣೆ
ಚಂದ್ರಯಾನ-2 ಉಡಾವಣೆ
ಚೆನ್ನೈ: ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ  ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಆಗಸ್ಟ್ 20ರ ವೇಳೆಗೆ ಚಂದ್ರನನ್ನು ತಲುಪಲಿದೆ ಎಂದು ಬುಧವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ತಿಳಿಸಿದೆ.
ಚಂದ್ರಯಾನ್ -2 ಗಗನನೌಕೆಯು ಮೊದಲ ಭೂ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ್ದು, ಜುಲೈ 26ರಂದು ನಿಗದಿಯಂತೆ ಎರಡನೇ ಭೂ ಕಕ್ಷೆಯನ್ನು ಸೇರಲಿದೆ ಎಂದು ಇಸ್ರೋ ಹೇಳಿದೆ.
ಜುಲೈ 22 ರಂದು ಚಂದ್ರಯಾನ-2 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ-ಮಾರ್ಕ್ 3 ವಾಹಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಚಿಮ್ಮಿತ್ತು. 
ಬಾಹ್ಯಾಕಾಶದಲ್ಲಿ, ಚಂದ್ರಯಾನ-2 ಪರಿಕರಗಳು ನಮ್ಮ ನಿರೀಕ್ಷೆಯಂತೆ ಸಾಗುತ್ತಿವೆ. ಮುಂದಿನ ವಾರ, ಚಂದ್ರಯಾನ ಪರಿಕರಗಳು ಇರುವ ಸಮುಚ್ಛಯವನ್ನು ಚಂದ್ರನ ಕಕ್ಷೆಯತ್ತ ಸಾಗುವಂತೆ ಮಾಡುವ ಕೆಲವಾರು ವೈಜ್ಞಾನಿಕ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಚಂದ್ರಯಾನ-2 ಯೋಜನೆಯಲ್ಲಿ ಇದು ಅತ್ಯಂತ ಮಹತ್ವಪೂರ್ಣವಾದವು. ಯೋಜನೆಯ ಈವರೆಗಿನ ಪ್ರಗತಿ ಸಮಾಧಾನಕರವಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com